







ಧರ್ಮಸ್ಥಳ: ಫೇಸ್ಬುಕ್ನ ಹೆಸರಾಂತ ಸಾಹಿತ್ಯ ಸಮೂಹಗಳಲ್ಲಿ ಒಂದಾದ ‘ಯುಗಾದಿ ಬಳಗ’ದ ವತಿಯಿಂದ ‘ಸ್ನೇಹ ಪರ್ವ-2’ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮವು ಇತ್ತೀಚೆಗೆ ಧರ್ಮಸ್ಥಳದ ನೇತ್ರಾವತಿ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಬಿ. ಭುಜಬಲಿ ಅವರು ವಹಿಸಿದ್ದರು. ಯುಗಾದಿ ಬಳಗದ ವ್ಯವಸ್ಥಾಪಕರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಕೊಪ್ಪದ ಹೆಸರಾಂತ ಸಾಹಿತಿ ಶಶಿಧರ್ ಎಲ್.ಎಸ್., ತೀರ್ಥಹಳ್ಳಿಯ ‘ಸತ್ಯಶೋಧ’ ಪತ್ರಿಕೆಯ ಸಂಪಾದಕ ಅರುಣ್ ಮಂಜುನಾಥ್, ಬೆಂಗಳೂರಿನ ಮಂಜುಳಾ ಪ್ರಸಾದ್ ಹಾಗೂ ರಾಜೇಶ್ವರಿ ಉಮೇಶ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಕಳೆ ನೀಡಿದರು.
ಇದೇ ಸಂದರ್ಭದಲ್ಲಿ ಬಳಗದ ವಿವಿಧ ಕ್ಷೇತ್ರಗಳ ಸಾಧಕರಿಗೆ ವಿಶೇಷ ಬಿರುದುಗಳನ್ನು ನೀಡಿ ಗೌರವಿಸಲಾಯಿತು.ಬಳಗದ ಹಿರಿಯ ಸದಸ್ಯರಿಗೆ ನೀಡಲಾದ ಗೌರವ.ಯುಗಾದಿ ಐಸಿರಿ: ಸಕ್ರಿಯವಾಗಿ ತೊಡಗಿಸಿಕೊಂಡ ಸದಸ್ಯರಿಗೆ ಪ್ರದಾನ.ಯುಗಾದಿ ಸುಜ್ಞಾನ ಸಿರಿ ಮತ್ತು ಪ್ರತಿಭಾ ಸಿರಿ: ವಿವಿಧ ಸಾಹಿತ್ಯಿಕ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭಾವಂತ ಸದಸ್ಯರಿಗೆ ನೀಡಿ ಪ್ರೋತ್ಸಾಹಿಸಲಾಯಿತು.


ಯಲ್ಲಾಪುರದ ಶೈಲಾ ಭಟ್ ಅತಿಥಿಗಳನ್ನು ಸ್ವಾಗತಿಸಿದರೆ, ಹೊನ್ನಾವರದ ಶ್ರೀನಾಥ್ ಪಿ.ಎಸ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬೆಂಗಳೂರಿನ ಶೀಲತಾ ಭಾರ್ಗವ್ ಮತ್ತು ಉಜಿರೆಯ ಆಶಾ ಅಡೂರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಅಕ್ಷತಾ ಅಡೂರ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ, ಬೆಂಗಳೂರಿನ ಸುಜಾತ ಭಟ್ ವಂದನಾರ್ಪಣೆ ಮಾಡಿದರು.
ಸಾಂಸ್ಕೃತಿಕ ವೇದಿಕೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಸದಸ್ಯರು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಮಡಿಕೇರಿಯ ವೀಣಾ ಉಮೇಶ್, ಆಮಂತ್ರಣದ ವಿಜಯಕುಮಾರ್ ಜೈನ್ ಹಾಗೂ ಅರುಣ್ ಜೈನ್ ಸೇರಿದಂತೆ ನೂರಾರು ಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.









