ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ; ವಾರಸುದಾರರ ಪತ್ತೆಗೆ ಪೊಲೀಸರ ಮನವಿ

0

ಬೆಳ್ತಂಗಡಿ: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪವಿರುವ ಡ್ಯಾಂ ನೀರಿನಲ್ಲಿ ಎಪ್ರಿಲ್ 27ರಂದು ಬೆಳಗ್ಗೆ ಅಪರಿಚಿತ ಗಂಡಸಿನ ಮೃತದೇಹವೊಂದು ಪತ್ತೆಯಾಗಿದೆ.ಘಟನೆಯ ವಿವರ: ಸುಮಾರು 40 ರಿಂದ 45 ವರ್ಷ ಪ್ರಾಯದ ವ್ಯಕ್ತಿಯ ಮೃತದೇಹವು ನೀರಿನಲ್ಲಿ ಕವುಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧರ್ಮಸ್ಥಳದ ‘ಶೌರ್ಯ’ ವಿಪತ್ತು ನಿರ್ವಹಣಾ ತಂಡದ ಸದಸ್ಯರು ನೀರಿನಿಂದ ಮೃತದೇಹವನ್ನು ಮೇಲೆತ್ತಲು ಸಹಕರಿಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಮೃತರ ಚಹರೆ:ಎತ್ತರ: ಸುಮಾರು 5.7 ಅಡಿ, ದಪ್ಪ ಶರೀರ.ಮೈಬಣ್ಣ: ಎಣ್ಣೆ ಕಪ್ಪು, ಅಗಲವಾದ ಮುಖ.ಕೂದಲು: ತಲೆಯಲ್ಲಿ ಬಿಳಿ ಮಿಶ್ರಿತ ಕಪ್ಪು ಕೂದಲು ಹಾಗೂ ಮುಖದಲ್ಲಿ ಕಪ್ಪು-ಬಿಳಿ ಮಿಶ್ರಿತ ಗಡ್ಡ-ಮೀಸೆ ಇರುತ್ತದೆ.ಧರಿಸಿದ್ದ ಬಟ್ಟೆ: ಬಿಳಿ ಬಣ್ಣದಲ್ಲಿ ನೀಲಿ ಬಣ್ಣದ ಅಡ್ಡ ಮತ್ತು ಉದ್ದ ಗೆರೆಗಳಿರುವ ತುಂಬು ತೋಳಿನ ಶರ್ಟ್ ಹಾಗೂ ಕಾಫಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ.

ಸಂಪರ್ಕಕ್ಕೆ ಮನವಿ:ಮೃತರ ಬಗ್ಗೆ ಯಾವುದೇ ಮಾಹಿತಿ ಇರುವವರು ಅಥವಾ ವಾರಸುದಾರರು ಕಂಡುಬಂದಲ್ಲಿ ಕೂಡಲೇ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಧರ್ಮಸ್ಥಳ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ:ಧರ್ಮಸ್ಥಳ ಠಾಣೆ: 08256-277253PSI ಧರ್ಮಸ್ಥಳ: 7795424204, 8277986449CPI ಬೆಳ್ತಂಗಡಿ: 9480805336ಜಿಲ್ಲಾ ನಿಯಂತ್ರಣ ಕೊಠಡಿ: 0824-2220500

LEAVE A REPLY

Please enter your comment!
Please enter your name here