






ಶಾಲೆತ್ತಡ್ಕ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಶಾಲೆತ್ತಡ್ಕ ಸರಕಾರಿ ಪ್ರೌಢಶಾಲೆ ಮತ್ತೊಮ್ಮೆ ಶೇ.100 ಫಲಿತಾಂಶ ಸಾಧಿಸಿ ಗಮನ ಸೆಳೆದಿದೆ. ಇದು ಶಾಲೆಯ ನಿರಂತರ 6ನೇ ಬಾರಿ ಶತಮಾನ ಸಾಧನೆಯಾಗಿದೆ.


ಈ ವರ್ಷ ಪರೀಕ್ಷೆಗೆ ಹಾಜರಾದ 15 ವಿದ್ಯಾರ್ಥಿಗಳಲ್ಲಿ ಎಲ್ಲಾ 15 ಮಂದಿ ಉತ್ತೀರ್ಣರಾಗಿದ್ದು, ಶಾಲೆ 100% ಫಲಿತಾಂಶ ದಾಖಲಿಸಿದೆ. ಶಾಲೆಗೆ ‘A’ ಗ್ರೇಡ್ ದೊರೆತಿದೆ.ಫಲಿತಾಂಶದಲ್ಲಿ ಜ್ಞಾನ.ಯು.ಶೆಟ್ಟಿ 595/625 (95.20%) ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಭವನ ಕುಮಾರ್ 583/625 (93.28%) ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದು, ವನ್ಯಶ್ರೀ ಮತ್ತು ವಿಶ್ಮಿತಾ ಇಬ್ಬರೂ 566/625 (90.56%) ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.ಒಟ್ಟು 7 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದು, 6 ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯಶಿಕ್ಷಕಿ, ಶಿಕ್ಷಕ ವೃಂದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಸದಸ್ಯರು ಹಾಗೂ ಹಲೆ ವಿದ್ಯಾರ್ಥಿ ಸಂಘ ಮತ್ತು ಪೋಷಕರು ಸಂತೋಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.









