ಕಳೆಂಜ: ಸಿಡಿಲು ಬಡಿದು ಮನೆಗೆ ಹಾನಿ; ವಿದ್ಯುತ್ ಮೀಟರ್‌ ಭಸ್ಮ..!

0

ಕಳೆಂಜ: ಕಳೆಂಜ ಗ್ರಾಮದ ವ್ಯಾಪ್ತಿಯಲ್ಲಿ ಏ.25 ರಂದು ಸುರಿದ ನೆಲ್ಯಪಾಲ್ಕೆ ಮಾತ್ತಡಿ ನಿವಾಸಿ ಮುಗೇರ ಅವರ ಮನೆಯ ಸಮೀಪವಿದ್ದ ಮರವೊಂದು ಬುಡಮೇಲಾಗಿ ಮನೆಯ ಮೇಲೆ ಬಿದ್ದಿದೆ. ಇದರ ಬೆನ್ನಲ್ಲೇ ಸಂಭವಿಸಿದ ಸಿಡಿಲು ಪಕ್ಕದ ಮರಕ್ಕೆ ಅಪ್ಪಳಿಸಿದ್ದು, ಅದರ ತೀವ್ರತೆಗೆ ಮನೆಗೆ ಅಳವಡಿಸಲಾಗಿದ್ದ ವಿದ್ಯುತ್ ಮೀಟರ್‌ಗಳು ಮತ್ತು ವೈರಿಂಗ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ಅದೃಷ್ಟವಶಾತ್ ಘಟನೆಯ ವೇಳೆ ಮನೆಯಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ವಿದ್ಯುತ್ ಉಪಕರಣಗಳು ಮತ್ತು ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here