







ಮರೋಡಿ : ಇಲ್ಲಿಯ ಮಾಲಿಕ್ ದೀನಾರ್ ಜುಮಾ ಮಸ್ಜಿದ್ ಹಾಗೂ ಹಯಾತುಲ್ ಇಸ್ಲಾಮ್ ಮದ್ರಸಾದ ನವೀಕೃತ ಮಸೀದಿ ಉದ್ಘಾಟನೆ ಹಾಗೂ ಸೌಹಾರ್ದ ಸಮಾರಂಭವು ಏ.24 ರಂದು ಮರೋಡಿಯಲ್ಲಿ ನಡೆಯಲಿದೆ.
ದ.ಕ. ಜಿಲ್ಲೆಯ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ಖಾಝಿ ಅವರು ಮಧ್ಯಾಹ್ನ 12.15 ಗಂಟೆಗೆ ಮಸೀದಿ ಉದ್ಘಾಟನೆ ಉದ್ಘಾಟನೆ ನೆರವೇರಿಸಲಿದ್ದು, ಮಧ್ಯಾಹ್ನ 1 ಗಂಟೆಗೆ ಜುಮ್ಮಾ ನೇತೃತ್ವ ಮತ್ತು ಖುತುಬ ಪಾರಾಯಣ, ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ಖಾಝಿ ಅವರಿಂದ ಖಾಝೀ ಸ್ವೀಕಾರ, ಸಾಲ್ಮರದ ಸೈಯದ್ ಅಲ್ಆದಿ ಸರ್ಫುದ್ದೀನ್ ತಂಬಳ್ ಅವರ ನೇತೃತ್ವ ಹಾಗೂ ಕುಂಬೊಲ್ ಸೈಯದ್ ಜಾಫರ್ ಸ್ವಾದಿಕ್ ತಂಬಳ್ ಅವರು ದುಅ ನೆರವೇರಿಸಲಿದ್ದಾರೆ.


ಕಾಶಿಪಟ್ಣದ ದಾರನ್ನೂರ್ ಎಜುಕೇಷನ್ ಟ್ರಸ್ಟ್ನ ವೈಟ್ ಸ್ಟೋನ್ ಅಧ್ಯಕ್ಷ ಶರೀಫ್ ಹಾಜಿ ಅವರು ಮದರಸದ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಮಸೀದಿ ಮತ್ತು ಮದರಸ ಕಟ್ಟಡದ ನಿರ್ಮಾಣ ಮಾಡಿದ ಎಂ.ಎ. ಅಬುಬಕ್ಕರ್ ಮಾಸ್ತಿಕುಂಡು ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.ಸಂಜೆ ೭ ಗಂಟೆಗೆ ನಡೆಯಲಿರುವ ಸೌಹಾರ್ದ ಸಮಾರಂಭದ ಅಧ್ಯಕ್ಷತೆಯನ್ನು ಮಾಲಿಕುದ್ದೀನಾರ್ ಜುಮಾ ಮಸೀದಿ ಅಧ್ಯಕ್ಷ ಜನಾಬ್ ಫಕೀರಬ್ಬ ಮಾಸ್ಟರ್ ಮರೋಡಿ ಅವರು ವಹಿಸಲಿದ್ದಾರೆ.
ಮಾಲಿಕುದ್ದೀನಾರ್ ಜುಮಾ ಮಸೀದಿಯ ಸ್ವಾಗತ ಸಮಿತಿಯ ಅಧ್ಯಕ್ಷ ಜನಾಬ್| ಅಬ್ದುಲ್ ಸಲಾಮ್ ಅವರು ಸ್ವಾಗತ ಮಾಡಲಿದ್ದು, ಮಾಲಿಕುದ್ದೀನಾರ್ ಜುಮಾ ಮಸೀದಿ ಖತೀಬರು ಬಹು| ಅಬ್ದುಲ್ ಖಾದರ್ ಫಯಾಝ್ ನಹಿಮಿ ಅವರು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಕರ್ನಾಟಕ ಸರಕಾರದ ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಶಾಸಕ ಹರೀಶ್ ಪೂಂಜಾ ಅವರ ಗೌರವ ಉಪಸ್ಥಿತಿ ಇರಲಿದ್ದು, ಕರ್ನಾಟಕ ಬಾವೈಕ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಇಕ್ಬಾಲ್ ಬಾಳಿಲ ಪ್ರಾಸ್ತಾವಿಕ ಬಾಷಣ ಮಾಡಲಿದ್ದಾರೆ ಎಂದು ಮಾಲಿಕ್ ದೀನಾರ್ ಮಸೀದಿಯ ಸಮಿತಿಯವರು ತಿಳಿಸಿದ್ದಾರೆ.









