






ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಏಪ್ರಿಲ್ 16 ರಿಂದ 18ರ ವರೆಗೆ ಇಂಗ್ಲೀಷ್ ಭಾಷಾ ಪ್ರಾವಿಣ್ಯತಾ ತರಬೇತಿಯನ್ನು ಏರ್ಪಡಿಸಲಾಯಿತು. “ಆಧುನಿಕ ಸಮಾಜದಲ್ಲಿ ಆಂಗ್ಲ ಭಾಷೆಯು ಅಂತರಾಷ್ಟ್ರೀಯ ಭಾಷೆಯಾಗಿ ಬೆಳೆಯುತ್ತಿರುವುದರಿಂದ ಪ್ರತಿಯೊಬ್ಬರೂ ಭಾಷೆಯನ್ನು ಸರಿಯಾಗಿ ಕಲಿತು ಮಾತನಾಡಬೇಕು” ಎಂದು ಶಾಲಾ ಸಂಚಾಲಕ ವಂದನೀಯ ಫಾ. ವೋಲ್ಟರ್ ಡಿಮೆಲ್ಲೋರವರು ನುಡಿದು ಆಶೀರ್ವದಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಫಾ ಕ್ಲಿಫರ್ಡ್ ಪಿಂಟೋರವರು ಆಂಗ್ಲ ಭಾಷಾ ತರಬೇತಿಯನ್ನು ನೀಡಲು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಅನಿತಾ ವೇಗಸ್ ಮತ್ತು ಸವಿತಾ ಸಾಲಿಯಾನ್ ಇವರ ಸಾಧನೆಗಳ ಬಗ್ಗೆ ವಿವರಿಸಿದರು ಹಾಗೂ ತರಬೇತಿಗೆ ಆಗಮಿಸಿದ ಶಿಕ್ಷಕರೆಲ್ಲರೂ ಇಂಗ್ಲೀಷ್ ಭಾಷೆಯ ಮೇಲೆ ಪ್ರಾವಿಣ್ಯತೆಯನ್ನು ಗಳಿಸಿಕೊಂಡು ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ನುಡಿದರು.


ಸಂಪನ್ಮೂಲ ವ್ಯಕ್ತಿಯಾಗಿದ್ದ ಅನಿತಾ ವೇಗಸ್ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ. ಎ. ಮತ್ತು ಲಂಡನ್ನಿನ ಟ್ರಿನಿಟಿ ಕಾಲೇಜಿನಲ್ಲಿ ಕಮ್ಯುನಿಕೇಶನ್ ಸ್ಕಿಲ್ಸ್ (8ನೇ ಗ್ರೇಡ್) ಪಡೆದಿರುವ ಇವರು ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಂದ ಆಂಗ್ಲ ಭಾಷಾ ಸಮಗ್ರ ವ್ಯಾಕರಣ, ಮಾತನಾಡುವ ಕೌಶಲ್ಯದ ಬಗ್ಗೆ ಶಿಕ್ಷಕರು ತರಬೇತಿಯನ್ನು ಪಡೆದುಕೊಂಡರು.
ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ , ಸೆಕ್ರೆಟ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರ್, ಸೈಂಟ್ ಪೌಲ್ ಅಂಗ್ಲ ಮಾಧ್ಯಮ ಶಾಲೆ ನಾರಾವಿ, ಸೈಂಟ್ ಪೀಟರ್ ಆಂಗ್ಲ ಮಾಧ್ಯಮ ಶಾಲೆ ಅಳದಂಗಡಿ ಹಾಗೂ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆ ಇಲ್ಲಿಯ ಎಲ್ಲಾ ಶಿಕ್ಷಕ ವೃಂದದವರು ಭಾಗವಹಿಸಿ ತರಬೇತಿಯ ಪ್ರಯೋಜನವನ್ನು ಪಡೆದರು.
ವೇದಿಕೆಯಲ್ಲಿ ಮಡಂತ್ಯಾರ್ ಸೆಕ್ರೆಟ್ ಹಾರ್ಟ್ ಕಾಲೇಜ್ ನ ಮುಖ್ಯೋಪಾಧ್ಯಾಯ ಗುರುಗಳು ದೀಪಕ್ ಡಿ ಸೋಜಾ , ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಗುರುಗಳು ವಿಜಯ್ ಲೋಬೊ ಮತ್ತು ಪ್ರೀತಿ ಗೋಮ್ಸ್ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಶ್ರೀಲತಾ ಸ್ವಾಗತಿಸಿದರು. ಸಹ ಶಿಕ್ಷಕಿ ಪ್ರೀತ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು.









