ಏಪ್ರಿಲ್ 19: ಬಿ.ಸಿ.ರೋಡ್‌ನ ಪರ್ಲಿಯಾ ನರ್ಸಿಂಗ್ ಹೋಮ್‌ನಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಬಿ.ಸಿ.ರೋಡ್: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೈಕಂಬದ ಪರ್ಲಿಯಾ ನರ್ಸಿಂಗ್ ಹೋಮ್ ವತಿಯಿಂದ ಏಪ್ರಿಲ್ 19ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.ಅಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:30 ರವರೆಗೆ ಆಸ್ಪತ್ರೆಯ ಆವರಣದಲ್ಲಿ ಶಿಬಿರ ನಡೆಯಲಿದ್ದು, ಅನುಭವಿ ತಜ್ಞ ವೈದ್ಯರ ತಂಡವು ಸಾರ್ವಜನಿಕರಿಗೆ ಲಭ್ಯವಿರಲಿದೆ.

ಈ ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ತಜ್ಞ ವೈದ್ಯರಿಂದ ಉಚಿತ ತಪಾಸಣೆ ಮತ್ತು ಸಲಹೆ ದೊರೆಯಲಿದೆ. ಇದರೊಂದಿಗೆ ಪಲ್ಮನರಿ ಶ್ವಾಸಕೋಶ ತಪಾಸಣೆ, ಬಿ.ಎಂ.ಡಿ (ಮೂಳೆಯ ಸಾಂದ್ರತೆ) ಪರೀಕ್ಷೆ, ಇ.ಸಿ.ಜಿ (ವೈದ್ಯರ ಸಲಹೆಯ ಮೇರೆಗೆ), ಹಿಮೋಗ್ಲೋಬಿನ್, ಕ್ರಿಯೇಟಿನಿನಿನ್, ಬಿ.ಪಿ ಮತ್ತು ಶುಗರ್ ತಪಾಸಣೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುವುದು.ವಿಶೇಷ ರಿಯಾಯಿತಿ:ಶಿಬಿರದ ಅಂಗವಾಗಿ ರೋಗಿಗಳಿಗೆ ಅನುಕೂಲವಾಗಲು ಇತರ ಎಲ್ಲಾ ರೀತಿಯ ಲ್ಯಾಬ್ ರಕ್ತ ಪರೀಕ್ಷೆಗಳು ಹಾಗೂ ಎಕ್ಸ್-ರೇ ಪರೀಕ್ಷೆಗಳಿಗೆ ಶೇ. 40% ರಷ್ಟು ಭಾರಿ ರಿಯಾಯಿತಿಯನ್ನು ಘೋಷಿಸಲಾಗಿದೆ.

ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ಮಂಡಳಿಯು ಪ್ರಕಟಣೆಯಲ್ಲಿ ವಿನಂತಿಸಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಮೊಬೈಲ್ ಸಂಖ್ಯೆ 82963 21077 ಅಥವಾ 91199 77108 ಅನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here