






ಮುಂಡೂರು : ಮುಂಡೂರು : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎ. 23ರಂದು ಆಲಂಬಾಡಿ ನೀಲೇಶ್ವರ ಪದ್ಮನಾಭಾ ತಂತ್ರಿಗಳ ನೇತೃತ್ವದಲ್ಲಿ ವರ್ಷಾವಧಿ ಜಾತ್ರೆ, ಪ್ರತಿಷ್ಠಾ ವರ್ಧoತಿ ಉತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.


ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಪುಣ್ಯಹವಾಚನ, ಗಣಪತಿ ಹೋಮ, ಕಲಶಾಭಿಷೇಕ, ಚಂಡಿಕಾ ಹೋಮ, ದೈವಗಳಿಗೆ ತಂಬಿಲ ಸೇವೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.
ಪೂರ್ವಾಹ್ನ ದೇವರ ಬಳಿ ಉತ್ಸವ, ಮಹಾ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಸಂಜೆ ಶ್ರೀ ಶಾರದಾಂಬ ಭಜನಾ ಮಂಡಳಿ ಮುಂಡೂರು, ಶ್ರೀ ನಾಗಾಂಬಿಕ ಭಜನಾ ಮಂಡಳಿ ಶ್ರೀ ಕ್ಷೇತ್ರ ಮಂಗಳ ಗಿರಿ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ ರಂಗ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ಬಳಿಕ ಖ್ಯಾತ ಯಕ್ಷಗಾನ ಕಲಾವಿದ ಪ್ರವೀತ್ ಆಚಾರ್ಯ ಮುಂಡೂರು ಇವರ ಸ್ಮರಣಾರ್ಥ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡೂರು ಹಾಗೂ ಶ್ರೀ ಅಂಬಿಕಾಅನ್ನಪೂರ್ಣೇಶ್ವರಿ ಯಕ್ಷಗಾನ ಬಯಲಾಟ ಸೇವಾ ಸಮಿತಿ ಇಲ್ಲಿಯ ಯಕ್ಷಗಾನ ತರಬೇತಿ ಕೇಂದ್ರದ ಮಕ್ಕಳಿಂದ ಯಕ್ಷಗಾನ ಬಯಲಾಟ “ಶ್ರೀ ದೇವಿ ವೈಷ್ಣವಿ “ಸ್ಥಳೀಯ ಮಕ್ಕಳು ಹಾಗೂ ಸಾರ್ವಜನಿಕರಿಂದ ವಿವಿಧ ನೃತ್ಯ ವೈವಿಧ್ಯ ಕಾರ್ಯಕ್ರಮ, ಡೆನ್ನಾನ ಕಲಾವಿದರು ಕಾರ್ಕಳ ಅಭಿನಯಿಸುವ ತುಳು ಸಂಸಾರಿಕ ಹಾಸ್ಯ ಭರಿತ ನಾಟಕ “ಬ್ಯಾಂಡ್ ವಾದ್ಯ ” ಪ್ರದರ್ಶನ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮಾನಂದ ಸಾಲಿಯಾನ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೀವ್ ಸಾಲಿಯಾನ್ ತಿಳಿಸಿದ್ದಾರೆ..









