ಎ.14 ರಿಂದ ಎ. 23: ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ; ಎ. 25: ಶ್ರೀ ಭದ್ರಾಕಾಳಿ ಪ್ರತಿಷ್ಠಾ ಮಹೋತ್ಸವ

0

ವೇಣೂರು: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಎ. 14ರಿಂದ ಮೊದಲ್ಗೊಂಡು ಎ.23ರವರೆಗೆ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.ಎ. 14ರಂದು ಬೆಳಿಗ್ಗೆ ತೋರಣ ಮುಹೂರ್ತ ನಡೆದು ಪೂರ್ವಾಹ್ನ ಗಂಟೆ 11.30ಕ್ಕೆ ಧ್ವಾಜಾರೋಹಣ ನೆರವೇರಲಿದೆ.

ಜಾತ್ರಾ ದಿನಗಳಂದು ಶ್ರೀ ದೇವರಿಗೆ ವಿಶೇಷ ಪೂಜೆ, ಭಜನೆ, ಉತ್ಸವ, ಮಹಾಪೂಜೆ, ನಿತ್ಯಬಲಿ ನಡೆಯಲಿದೆ. ಎ. 19ರಂದು ರಾತ್ರಿ ರಕ್ತೇಶ್ವರಿ ದೈವದ ನೇಮ ನಡೆಯಲಿದೆ. ಎ. ೨೦ರಂದು ರಾತ್ರಿ ದರ್ಶನ ಬಲಿ, ಕಲ್ಕುಡ-ಕಲ್ಲುರ್ಟಿ ದೈವಗಳ ನೇಮ ನಡೆಯಲಿದೆ. ಎ. 22ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಚೂರ್ಣೋತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.

ರಾತ್ರಿ ಶ್ರೀ ಕೊಡಮಣಿತ್ತಾಯ ದೈವದ ನೇಮ, ಉತ್ಸವ ಹಾಗೂ ಮಹಾ ರಥೋತ್ಸವ ನಡೆಯಲಿದೆ. ಎ. 23ರಂದು ರಾತ್ರಿ ಅಂಗಣ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ. ಎ. 25ರಂದು ಶ್ರೀ ಭದ್ರಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವ ಜರಗಲಿದ್ದು, ಭಕ್ತಾಧಿಗಳು ಎಲ್ಲಾಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎ. ಜಯರಾಮ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಸಿರುವಾಣಿ ಹೊರೆಕಾಣಿಕೆಜಾತ್ರಾ ಸಂದರ್ಭದಲ್ಲಿ ಪ್ರತೀ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದ್ದು, ಎ. 13ರಿಂದ 21ರವರೆಗೆ ಭಕ್ತರು ಹಸಿರುವಾಣಿ ಹೊರೆಕಾಣಿಕೆಯನ್ನು ಕ್ಷೇತ್ರಕ್ಕೆ ಸಮರ್ಪಿಸಬಹುದಾಗಿದೆ.

LEAVE A REPLY

Please enter your comment!
Please enter your name here