ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್ ಮುಂದಾಳತ್ವದಲ್ಲಿ ಸ್ವಚ್ಛತಾ ಆಂದೋಲನ

0


ಬೆಳ್ತಂಗಡಿ : ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್ ಮುಂದಾಳತ್ವದಲ್ಲಿ ಸ್ವಚ್ಛತಾ ಆಂದೋಲನವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ. ಬೆಳ್ತಂಗಡಿ ತಾಲೂಕು ‘ಶೌರ್ಯ’ ವಿಪತ್ತು ತಂಡ ಪತ್ರಕರ್ತರ ಸಂಘ ಬೆಳ್ತಂಗಡಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಬೃಹತ್ ಸ್ವಚ್ಛತಾ ಆಂದೋಲನ – 2026 ಎ. 12ರಂದು ನಡೆಯಿತು.

ಹಳ್ಳಿಯಿಂದ ನಗರವರೆಗೆ – ನಮ್ಮ ಸ್ವಚ್ಛತೆ, ನಮ್ಮಜವಾಬ್ದಾರಿ ಎಂಬ ದ್ಯೇಯ ವಾಖ್ಯಾ ದೊಂದಿಗೆ ಸವಣಾಲುವಿನಿಂದ ಬೆಳ್ತಂಗಡಿ ಚರ್ಚ್ ರಸ್ತೆವರೆಗೆ (ಸುಮಾರು 8 ಕಿ.ಮೀ) ರಸ್ತೆ ಬದಿ ಬಿಸಾಡಿದ ಕಸ ಸಂಗ್ರಹ, ಸ್ವಚ್ಛತೆ ಮೂಲಕ ಜಾಗೃತಿ ಮಾಡಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ಧರ್ಮ ಗುರು ವಂ. ಫಾ. ವಾಲ್ಟರ್ ಡಿಮೆಲ್ಲೋ, ಪಾಲನ ಮಂಡಳಿ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೊ, ವಿನ್ಸೆಂಟ್ ಮೋನಿಸ್ ಮೇಲoತಬಿಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಕಾಂತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಯೋಶೋಧರ, ಮೇಲoತಬೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಮಲ್ ಕುಮಾರ್ ಪತ್ರಕರ್ತಸಂಘದ ಮಾಜಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏನಿಂಜ, ವಾಳೆಯ ಗುರಿಕಾರರು, ಸದಸ್ಯರು ವಿಪತ್ತು ನಿರ್ವಹಣಾ ತಂಡದ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here