ಬೆಳ್ತಂಗಡಿ ಗುರುದೇವ ಪ್ರಥಮ ದರ್ಜೆ ಕಾಲೇಜು ವಾರ್ಷಿಕ ಶಿಬಿರ ಸಮಾರೋಪ ಎನ್ಎಸ್ಎಸ್ ಮೂಲಕ ಉತ್ತಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಳ್ಳಬೇಕು. ಪ್ರೀತಿತ ಧರ್ಮ ವಿಜೇತ್

0

ಬೆಳ್ತಂಗಡಿ :ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2025 26ನೇ ಶೈಕ್ಷಣಿಕ ವರ್ಷದ ವಾರ್ಷಿಕ ವಿಶೇಷ ಶಿಬಿರವನ್ನು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಯ್ಯೂರು ಕಸಬ, ಇಲ್ಲಿ ಎ.3ರಿಂದ 9 ರವರೆಗೆ ಜರುಗಿತು.

ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ .ರಿ. ಬೆಳ್ತಂಗಡಿ ಇದರ ಅಧ್ಯಕ್ಷೆ ಪ್ರೀತಿತಾ ಧರ್ಮವಿಜೇತ್ ಇವರು ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನಾ ಘಟಕಕ್ಕೆ ಸೇರಿಕೊಂಡು ತಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಳ್ಳಬೇಕು. ಶಿಸ್ತು ,ಸಮಯಪ್ರಜ್ಞೆ, ತಾಳ್ಮೆ ಮುಂತಾದ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು, ಹೆತ್ತವರಿಗೆ ಗೌರವ ಕೊಡಬೇಕು, ಎನ್ಎಸ್ಎಸ್ ನಂತಹ ಘಟಕಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಆದರ್ಶ ವಿದ್ಯಾರ್ಥಿಯಾಗಿ ಬಾಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಜಗನ್ನಾಥ ಮಾತನಾಡಿ ಏಳು ದಿನಗಳ ಕಾಲ ನಡೆದ ಶಿಬಿರವು ನಮ್ಮ ಶಾಲೆಯ ಅಭಿವೃದ್ಧಿಗೆ ಬಹಳಷ್ಟು ಸಹಕಾರಿಯಾಗಿದೆ ಎಂದರು. ಶಾಲಾ ಮುಖ್ಯೋಪಾಧ್ಯಾಯಿನಿ ವಸಂತಿ ಕೆ.ಎನ್ ಸಮಾರೋಪ ಭಾಷಣ ಮಾಡಿ ಎನ್ಎಸ್ಎಸ್ ಶಿಬಿರಾರ್ಥಿ ಗಳ ಕಾರ್ಯವೈಕರಿಯ ಬಗ್ಗೆ ಪ್ರಶಂಸನಿಯ ಮಾತುಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ ಗೌರವ ಉಪಸ್ಥಿತರಿದ್ದು ಅಭಿನಂದನಾ ಭಾಷಣವನ್ನು ಮಾಡಿ ಶಿಬಿರಕ್ಕೆ ತನು ಮನ ಧನ ಗಳಿಂದ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು.

ಮುಖ್ಯ ಅತಿಥಿಗಳಾಗಿ ವಿಶ್ವನಾಥ ಪೂಜಾರಿ ಮಲೆಬೆಟ್ಟು , ಲೀಲಾ, ಸೇವಾ ಪ್ರತಿನಿಧಿಗಳು ಧರ್ಮಸ್ಥಳ , ಶಾಲೆಯ ತಾಯಂದಿರ ಸಮಿತಿಯ ಅಧ್ಯಕ್ಷೆ ಜಯಂತಿ ಬಾಲಚಂದ್ರ ಗೌಡ ಫೋಸಟ್ಟೂ, ಉಪಸ್ಥಿತರಿದ್ದು ಶುಭ ಹಾರೈಸಿದರು. ಎನ್ಎಸ್ಎಸ್ ಘಟಕದ ನಾಯಕರದ ಆಶಿಕ್ ದ್ವಿತೀಯ ಬಿ ಕಾಂ ,ಕುಮಾರಿ ಭೂಮಿಕಾ ಶೆಟ್ಟಿ ದ್ವಿತೀಯ ಬಿ ಕಾಂ , ಕುಮಾರಿ ದೀಕ್ಷಾ ದ್ವಿತೀಯ ಬಿಕಾಂ ,ಮನಘೋಷಿತ್ ಪ್ರಥಮ ಬಿ ಸಿ ಎ , ಚಿಂತನ್ ಪ್ರಥಮ ಬಿಎ, ಶಿಬಿರದ ಅನುಭವವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಶಿಬಿರದ ನೆನಪಿಗಾಗಿ ಶಾಲೆಗೆ ಕಂಚಿನ ಗಂಟೆಯನ್ನು ನೀಡಲಾಯಿತು. ಶಿವರಾಧಿಕಾರಿ ಬಿ. ಎ. ಶಮೀವುಲ್ಲ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ಸಹ ಶಿಬಿರ ಅಧಿಕಾರಿ ಅಂಬಿಕಾ ಶಿಬಿರದ ಸಂಪೂರ್ಣ ವರದಿಯನ್ನು ಮಂಡಿಸಿದರು, ಶಿಬಿರಾರ್ಥಿಗಳಾದ ದೀಕ್ಷಿತ್ ಮತ್ತು ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಬಿರ ಅಧಿಕಾರಿಗಳಾದ ಸತೀಶ್ ಸಾಲಿಯಾನ್ ಧನ್ಯವಾದಗೈದರು.

LEAVE A REPLY

Please enter your comment!
Please enter your name here