ಪುಂಜಾಲಕಟ್ಟೆ ಯಕ್ಷದ್ರುವ ಪಟ್ಲ ಪೌಂಡೇಶನ್ ಮಹಿಳಾ ಘಟಕದ ಮಹಾಸಭೆ

0

ಪುಂಜಾಲಕಟ್ಟೆ: ಯಕ್ಷದ್ರುವ ಪಟ್ಲಪೌಂಡೇಶನ್ ಮಹಿಳಾ ಘಟಕ ಇದರ ಮಹಾಸಭೆಯು ಏ.4 ರಂದು ಮುರುಗೇಂದ್ರ ಸಭಾಭವನದಲ್ಲಿ ಅಧ್ಯಕ್ಷರಾದ ಉಮಾ ಡಿ.ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ವಿದ್ಯಾರತ್ನ ಪ್ರಶಸ್ತಿ ಬಂದ ಇವರಿಗೆ ಮಹಿಳಾ ಘಟಕದ ವತಿಯಿಂದ ಗೌರವದ ಸನ್ಮಾನ ನಡೆಯಿತು. ಮಹಿಳಾ ಘಟಕದ ಎಲ್ಲಾ ಪದಾಧಿಕಾರಿಗಳು ಸೇರಿ ಇವರನ್ನು ಗೌರವಿಸಿದರು.ಘಟಕದ ಗೌರವ ಮಾರ್ಗದರ್ಶಕಿ ಲಕ್ಷ್ಮಿ ಸಂಜೀವ ಶೆಟ್ಟಿ , ಮುಗೆರೋಡಿ ಗೌರವ ಸಲಹೆಗಾರೆ ತುಳಸಿ ಹಾರಬೆ, ಉಪಾಧ್ಯಕ್ಷೆ ರೇಖಾ ಆನಂದ ಶೆಟ್ಟಿ , ಪಟ್ಲ ಸತೀಶ್ ಶೆಟ್ಟಿ ಸಹೋದರಿ ವಿದ್ವತ್ ಕಾಲೇಜಿನ ಉಪನ್ಯಾಸಕಿ ಶೋಭ ವಿಜಯ ಶೆಟ್ಟಿ ಹಾಗೂ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಶಿಕಲ ಗೋಪಾಲ ಇವರ ಸಮ್ಮುಖದಲ್ಲಿ ಎಲ್ಲಾ ಸದಸ್ಯರು ಸೇರಿ ಸನ್ಮಾನಿಸಿ ಗೌರವಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ಜಿಲ್ಲಾ ಮಟ್ಟದ ವಿದ್ಯಾರತ್ನ ಪ್ರಶಸ್ತಿಗೆ ಭಾಜನರಾದ ನೂತನ ಗೌರವಾಧ್ಯಕ್ಷೆ ಉಮಾ ಡಿ. ಗೌಡ ಇವರನ್ನು ಘಟಕದ ಪರವಾಗಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here