ಉಜಿರೆ ರೈತ ಉತ್ಪಾದಕರ ಕಂಪನಿಯ ಗೋದಾಮು ಕಟ್ಟಡ ಉದ್ಘಾಟನೆ

0

ಉಜಿರೆ : ಉಜಿರೆ ರೈತ ಉತ್ಪಾದಕರ ಕಂಪನಿಯ ವಿಸ್ಕೃತ ಗೋದಾಮು ಕಟ್ಟಡದ ಉದ್ಘಾಟನೆ, ಷೇರು ಪ್ರಮಾಣ ಪತ್ರ ವಿತರಣೆ, ಹಾಗು ಕೃಷಿ ಮಾಹಿತಿ ಕಾರ್ಯಾಗಾರ.ಎ. 7 ರಂದು ಓಡಲ ಕಂಪನಿಯ ಕಚೇರಿಯಲ್ಲಿ ಅಧ್ಯಕ್ಷ ಜಿ.ಗಣೇಶ್ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಬೆಳ್ತಂಗಡಿ ಸಹಾಯಕ ಕೃಷಿ ನಿರ್ದೇಶಕ ಎ.ಡಿ.ವೀರಭದ್ರಪ್ಪ ನೆರವೇರಿಸಿ, ಜಿಲ್ಲೆಯಲ್ಲಿಯೇ ರೈತರಿಗೆ ಉತ್ತಮ ಸೇವೆಯನ್ನು ನೀಡುವಲ್ಲಿ ಉಜಿರೆ ರೈತ ಉತ್ಪಾದಕರ ಕಂಪನಿ ಗೆ ಉತ್ತಮ ಹೆಸರಿದೆ ,ಉತ್ತಮ ಅಭಿವೃದ್ದಿಯಾಗಳೆಂದು ಶುಭ ಹಾರೈಸಿದರು, ಸಂಪನ್ಮೂಲ ವ್ಯಕ್ತಿಗಳಾದ ಕೆ.ವಿ.ಕೆ. ಮಹಾವಿದ್ಯಾಲಯದ ನಿವೃತ್ತ ಪ್ರೊಫೆಸರ್ ಡಾ. ನಾಗರಾಜ್, ಡಾ.ವಿಶು ವಿಜ್ಞಾನಿಗಳು, ಆಡಳಿತ ನಿರ್ದೇಶಕರು ಅವೆನ್ಚೂರು ಆಗ್ರೋ ಪ್ರೋಡಾಕ್ಟ್ , ರೈತರಿಗೆ ವೈಜ್ಞಾನಿಕ ತರಭೇತಿ ನೀಡಿದರು.

ವೇದಿಕೆಯಲ್ಲಿ ಶಿವಪ್ರಸಾದ್ ಮಲೆಬೆಟ್ಟು, ಭಾನುಪ್ರಕಾಶ್, ಅನುಪ್ ಮಿನ್ ಶಕ್ತಿ, ಉಪಸ್ಥಿತರಿದ್ದರು, ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಕುರ್ನಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು , ಕಂಪನಿಯ ನಿರ್ದೇಶಕ ಚಂದ್ ಶೇಖರ್ ನಿಡ್ಲೆ ಕಾರ್ಯಕ್ರಮ ನಿರೂಪಿಸಿದರು, ಇನ್ನೋರ್ವ ನಿರ್ದೇಶಕ ಸೀತಾರಾಮ ಶೆಟ್ಟಿ ಕೆಂಬರ್ಜೆ ಧನ್ಯವಾದ ವಿತ್ತರು .

LEAVE A REPLY

Please enter your comment!
Please enter your name here