







ಪಡ್ಡಂದಡ್ಕ: ಮುನವಿರುಲ್ ಮದರಸ ಪಡ್ಡoದಡ್ಕ ಮತ್ತು ಪೆರಿಂಜೆ ಮದರಸದ ಮಕ್ಕಳಿಗೆ ಉಚಿತ ಮುಸಾಬ್- ಕಿತಾಬ್ ಮತ್ತು ನೋಟ್ ಬುಕ್ ವಿತರಣೆಎ. 5ರಂದು ನಡೆಯಿತು.


ಕ್ಲಾಸ್ ಒಂದರಿಂದ 10 ನೇ ತರಗತಿ ಮದರಸದ ವಿದ್ಯಾರ್ಥಿಗಳಿಗೆ ಟೆಕ್ಸ್ಟ್ ಬುಕ್ ನೋಟ್ ಬುಕ್ ಗಳನ್ನು ಡಾ ಎಂ ಕೆ. ಗರ್ಡಾಡಿ ಪ್ರಾಯೋಜಿತ್ವದಲ್ಲಿ ಸುಮಾರು ₹ 85 ಸಾವಿರ ವೆಚ್ಚದಲ್ಲಿ ನೂರುಲ್ ಹುಧಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ ವಿತರಿಸಿದರು.
ಕತೀಬ್ ಸಮೀರ್ ದಾರಿಮಿ ದುವಾ ಪ್ರಾರ್ಥನೆ ಮಾಡಿ ಉದ್ಘಾಟಿಸಿದರು, ಸದರ್ ಮೊಹಲ್ಲಿಂ ಅಬ್ದುಲ್ ರಹಿಮಾನ್ ಯಮಾನಿ ,ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ರಫೀಕ್ ಪಡ್ಡ, ಅಶ್ರಫ್ ಕಿರೋಡಿ, ಎಂ ಕೆ ನಜೀರ್ ಕಟ್ಟೆ ಬಳಿ ಮತ್ತು ಸಿಬಂದಿ ವರ್ಗ ಉಪಸ್ಥಿತರಿದ್ದರು.









