ಗುರುವಾಯನಕೆರೆ: ಬ್ರೈಡ್ ಆರ್ಕೇಡ್‌ನಲ್ಲಿ ‘ಬ್ರೈಡ್ ಫ್ಯಾಬ್ ಕೇರ್’ ಲೋಕಾರ್ಪಣೆ

0

ಗುರುವಾಯನಕೆರೆ: ಪ್ರತಿಷ್ಠಿತ ವಸ್ತ್ರ ವಿನ್ಯಾಸ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಬ್ರೈಡ್ ಆರ್ಕೇಡ್‌ನಲ್ಲಿ, ಅತ್ಯಾಧುನಿಕ ಬಟ್ಟೆ ಆರೈಕೆ ಸೇವೆಯನ್ನೊಳಗೊಂಡ ‘ಬ್ರೈಡ್ ಫ್ಯಾಬ್ ಕೇರ್’ ಏ.4 ಶನಿವಾರದಂದು ಅದ್ಧೂರಿಯಾಗಿ ಉದ್ಘಾಟನೆಗೊಂಡಿತು.

ಉದ್ಘಾಟನಾ ಸಮಾರಂಭದಲ್ಲಿ ಸುಜಿತಾ ವಿ. ಬಂಗೇರ ಹಾಗೂ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ ಮುಗುಳಿ ನಾರಾಯಣ ರಾವ್ ಅವರು ಜ್ಯೋತಿ ಬೆಳಗಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಬ್ರೈಡ್ ಆರ್ಕೇಡ್‌ನ ಮಾಲೀಕರಾದ ಪ್ರಶಾಂತ್, ಪತ್ನಿ ನಮಿತಾ ಹಾಗೂ ಕುಟುಂಬಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ನೂತನ ಸಾರಿ ಕೇರ್ ವಿಭಾಗವನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದರು.

ನವಶಕ್ತಿ ರಾಜೇಶ್ ಶೆಟ್ಟಿ, ಟೈಲರ್ ಅಸೋಸಿಯೇಶನ್ ಜಿಲ್ಲಾ ಉಪಾಧ್ಯಕ್ಷರಾದ ವೇದಾವತಿ ಜನಾರ್ಧನ್, ಟೈಲರ್ ಕೋ ಆಪರೇವಿವ್ ಸೊಸೈಟಿ ಅಧ್ಯಕ್ಷ ವಲೇರಿಯನ್ ರೋಡ್ರಿಗಸ್ ಉಪಸ್ಥಿತರಿದ್ದರು.ಟೈಲರ್ ಅಸೋಸಿಯೇಶನ್ ತಾಲೂಕು ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ ಕಾರ್ಯಕ್ರಮ ನಿರ್ವಹಿಸಿದರು.‌

ಬೆಳ್ತಂಗಡಿ ಜನತೆಗೆ ವಿಶೇಷ ಸೇವೆ: ಕಳೆದ 10 ವರ್ಷಗಳಿಂದ ‘ಬ್ರೈಡ್ ಬೊಟಿಕ್’ ಮೂಲಕ ಗುಣಮಟ್ಟದ ಬ್ಲೌಸ್ ಹಾಗೂ ಗೌನ್ ಹೊಲಿಗೆಯಲ್ಲಿ ಮನೆಮಾತಾಗಿದ್ದ ಪ್ರಶಾಂತ್ ಅವರು, ಈಗ ಬಟ್ಟೆಗಳ ಸಮಗ್ರ ನಿರ್ವಹಣೆಗಾಗಿ ಈ ಹೊಸ ಹೆಜ್ಜೆಯನ್ನಿಟ್ಟಿದ್ದಾರೆ. ಈ ಸಂಸ್ಥೆಯಲ್ಲಿ ಬಟ್ಟೆಗಳಿಗೆ ಸಂಬಂಧಿಸಿದ ಈ ಕೆಳಗಿನ ಪ್ರಮುಖ ಸೇವೆಗಳು ಲಭ್ಯವಿವೆ

ಡ್ರೈ ಕ್ಲೀನಿಂಗ್ ಮತ್ತು ಸ್ಟೀಮ್ ಐರನಿಂಗ್ ಸ್ಟೈನ್ನ್ ರಿಮೂವಲ್ (ಕಲೆ ನಿವಾರಣೆ) ಸಾರಿ ಸ್ಟಾರ್ಚಿಂಗ್ ಮತ್ತು ಸಾರಿ ಪಾಲಿಶಿಂಗ್ ಶೂ, ಬ್ಯಾಗ್ ಹಾಗೂ ಕರ್ಟನ್ ಕ್ಲೀನಿಂಗ್ ಸೇರಿದಂತೆ ಹಲವಾರುಗುಣಮಟ್ಟದ ಸೇವೆ ಹಾಗೂ ಆಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ಬಟ್ಟೆಗಳ ಅಂದವನ್ನು ಹೆಚ್ಚಿಸಲು ‘ಬ್ರೈಡ್ ಫ್ಯಾಬ್ ಕೇರ್’ ಸಜ್ಜಾಗಿದೆ. ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9886359797 ಅನ್ನು ಸಂಪರ್ಕಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here