ಬೆಳ್ತಂಗಡಿ: ಸೋಮಾವತಿ ನದಿ ಉಳಿಸಲು ಪಟ್ಟಣ ಪಂಚಾಯತ್ ಮಾಸ್ಟರ್ ಪ್ಲಾನ್; ಅನಾಗರಿಕರ ಆಟಕ್ಕೆ ಬಿತ್ತು ಬ್ರೇಕ್!

0

ಬೆಳ್ತಂಗಡಿ: ತಾಲೂಕಿನ ಜೀವನಾಡಿ ಸೋಮಾವತಿ ನದಿಯನ್ನು ಡಂಪಿಂಗ್ ಯಾರ್ಡ್ ಮಾಡುತ್ತಿದ್ದ ‘ಅನಾಗರಿಕ’ರಿಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಸರಿಯಾದ ಪಾಠ ಕಲಿಸಿದೆ. ನದಿಯ ಒಡಲಿಗೆ ತ್ಯಾಜ್ಯ ಸುರಿಯುತ್ತಿದ್ದ ಖದೀಮರ ಹಾದಿಗೆ ಪಟ್ಟಣ ಪಂಚಾಯತ್ ಗುಂಡಿ ತೋಡುವ ಮೂಲಕ ದಿಟ್ಟ ಕ್ರಮ ಕೈಗೊಂಡಿದೆ.

ಏನಿದು ಘಟನೆ?:ಬೆಳ್ತಂಗಡಿ ಪಟ್ಟಣದ ಪ್ರಮುಖ ನೀರಿನ ಮೂಲವಾಗಿರುವ ಸೋಮಾವತಿ ನದಿಯ ತೀರವನ್ನು ಕೆಲವರು ಕಳೆದ ಹತ್ತಾರು ವರ್ಷಗಳಿಂದ ಕಸ ಸುರಿಯುವ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ಹಳೆಯ ಕಟ್ಟಡದ ಅವಶೇಷಗಳು, ಪ್ಲಾಸ್ಟಿಕ್ ಚೀಲಗಳು, ಮದ್ಯದ ಬಾಟಲಿಗಳು ಹಾಗೂ ಹಳೆಯ ಬಟ್ಟೆಗಳನ್ನು ತಂದು ನದಿಯ ಒಡಲಿಗೆ ಸುರಿಯಲಾಗುತ್ತಿತ್ತು. ಇದರಿಂದಾಗಿ ನದಿಯ ನೀರು ಕಲುಷಿತಗೊಂಡು ಜಲಚರಗಳು ಸಾವನ್ನಪ್ಪುತ್ತಿದ್ದವು.

ಅಕ್ರಮ ದಂಧೆಗೆ ಶಾಕ್:ಮಳೆಗಾಲ ಮುಗಿಯುತ್ತಿದ್ದಂತೆ ನದಿ ತೀರದಲ್ಲಿ ಅಕ್ರಮ ಮರಳು ದಂಧೆ ಹಾಗೂ ತ್ಯಾಜ್ಯ ವಿಲೇವಾರಿ ಜೋರಾಗುತ್ತಿತ್ತು. ಪರಿಸರ ಪ್ರೇಮಿಗಳು ಹಾಗೂ ಪತ್ರಿಕೆಗಳು ಈ ಬಗ್ಗೆ ಹತ್ತಾರು ಬಾರಿ ವರದಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ, ಈ ಬಾರಿ ಎಚ್ಚೆತ್ತುಕೊಂಡ ಪಟ್ಟಣ ಪಂಚಾಯತ್, ತ್ಯಾಜ್ಯ ಸಾಗಿಸುವ ವಾಹನಗಳು ನದಿಯ ಹತ್ತಿರ ಬರದಂತೆ ಸಂಪರ್ಕ ರಸ್ತೆಯಲ್ಲಿ ‘U’ ಆಕಾರದ ಆಳವಾದ ಗುಂಡಿಗಳನ್ನು ತೋಡಿದೆ.ಸಾರ್ವಜನಿಕರ ಮೆಚ್ಚುಗೆ:ಪಟ್ಟಣ ಪಂಚಾಯತ್‌ನ ಈ ವಿಭಿನ್ನ ಮತ್ತು ಕಠಿಣ ನಿರ್ಧಾರದಿಂದಾಗಿ ಇದೀಗ ನದಿಗೆ ಕಸ ಸುರಿಯುವವರ ಹಾಗೂ ಮರಳು ಕಳ್ಳರ ಆಟಕ್ಕೆ ಬ್ರೇಕ್ ಬಿದ್ದಂತಾಗಿದೆ. “ನಮ್ಮ ಜೀವನಾಡಿಯಾದ ಸೋಮಾವತಿಯನ್ನು ಉಳಿಸಲು ಇಂತಹ ಕಠಿಣ ಕ್ರಮಗಳು ಅನಿವಾರ್ಯ” ಎಂದು ಸ್ಥಳೀಯರು ಪಂಚಾಯತ್ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here