ಹುತ್ತದಿಂದ ಜೇನು ತೆಗೆಯುತ್ತಿದ್ದಾಗ ಕೈಗೆ ಗಾಯವಾಗಿದ್ದ ವೃದ್ದ ಸಾವು

0

ಬೆಳ್ತಂಗಡಿ; ಹುತ್ತಕ್ಕೆ ಕೈ ಹಾಕಿ ಜೇನು ಸಂಗ್ರಹಿಸುತ್ತಿದ್ದಾಗ ಯಾವುದೋ ಜಂತು ಕಚ್ಚಿ ಎಡಕೈಗೆ ಗಾಯವಾಗಿದ್ದ ವೃದ್ಧರೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಬಡಗಕಾರಂದೂರು ಗ್ರಾಮದ ಅರ್ಕಿಜಡ್ಡ ಎಂಬಲ್ಲಿನ‌ ನಿವಾಸಿ ಕೃಷ್ಣಪ್ಪ ಮೂಲ್ಯ (63) ಎಂಬವರೇ ಈ ರೀತಿ ಮೃತಪಟ್ಟವರು.

ಮೃತರಿಗೆ 3 ಜನ ಗಂಡು ಮಕ್ಕಳಿದ್ದು, ಪತ್ನಿ‌ ಈ ಹಿಂದೆಯೇ ಮೃತಪಟ್ಟಿದ್ದರು. ಆ ಬಳಿಕ ಮೂರು ಮಂದಿ ಗಂಡು ಮಕ್ಕಳೂ ಸುಮಾರು 15 ವರ್ಷಗಳ ಹಿಂದೆ ಕೃಷ್ಣಪ್ಪ ಮೂಲ್ಯ ರವರನ್ನು ತೊರೆದು ಹೋಗಿದ್ದು, ತದನಂತರ ಕೃಷ್ಣಪ್ಪ ಮೂಲ್ಯ ಒಬ್ಬಂಟಿಗನಾಗಿಯೇ‌‌ ಜೀವನಸಾಗಿಸುತ್ತಿದ್ದರು.

ಕಳೆದ 15 ದಿನಗಳ ಹಿಂದೆ ಕೃಷ್ಣಪ್ಪ ಮೂಲ್ಯ ಅವರಿಗೆ ಹುತ್ತದಿಂದ ಜೇನು ತೆಗೆಯುವ ವೇಳೆ ಯಾವುದೋ ಜಂತು ಕಚ್ಚಿದ್ದು ಎಡಕೈ ಬಾತುಕೊಂಡಿತ್ತು. ಅದಕ್ಕೆ‌ ಚಿಕಿತ್ಸೆ ಪಡೆದುಕೊಳ್ಳುವಂತೆ ಒತ್ತಾಯಿಸಿದರೂ ಅವರು ನಿರಾಕರಿಸಿದ್ದು, ಏ.2 ರಂದು ಮಧ್ಯಾಹ್ನ 2:15 ಗಂಟೆಗೆ ಇದೇ ಗಾಯದ ದೆಸೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಅವರು ಮನೆಯಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇದೊಂದು ಅಸಹಜ ಸಾವು ಪ್ರಕರಣವಾಗಿದ್ದು, ಹೃದಯಾಘಾತದಿಂದಲೂ ಸಾವು ಸಂಭವಿಸಿರಬಹುದು‌ ಎಂಬ ಗುಮಾನಿಯೂ ಇದೆ.ಈ‌ ಬಗ್ಗೆ ಮುತ್ತಮ್ಮ ಎಂಬವರು ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.

LEAVE A REPLY

Please enter your comment!
Please enter your name here