






ಮಡಂತ್ಯಾರು: ಹನುಮ ಜಯಂತಿ ಪ್ರಯುಕ್ತ ಬಸವನಗುಡಿ SPYSS ಯೋಗ ಶಿಕ್ಷಣ ಸಮಿತಿಯ ಯೋಗ ತರಗತಿಯು ಶ್ರೀ ಕಾಮದೇನು ಶ್ರೀ ಗುರು ರಾಘವೇಂದ್ರ ಬ್ರoದಾವಣ ಕಾರ್ಯಸಿದ್ದಿ ಶ್ರೀ ವೀರಾಂಜನೇಯ ಕ್ಷೇತ್ರ ರತ್ನಗಿರಿಯಲ್ಲಿ ನಡೆಸಲಾಯಿತು.


ಉದ್ಘಾಟನೆಯನ್ನು ದೇವಸ್ಥಾನದ ಆಡಳಿತ ಮುಖ್ಯಸ್ಥೆ ಸ್ವರ್ಣ ಲತಾ ವಸಂತ ಹೆಗ್ಡೆ, ಸಹ ಶಿಕ್ಷಕರಾದ ಜಗದೀಶ್, ಯೋಗ ಬಂದುಗಳಾದ ಗೀತಾ ಮತ್ತು ನಾರಾಯಣ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಲಾಯಿತು.

ಯೋಗಾ ಬಂಧು ಶಿವಶಂಕರ ಕಾರ್ಯಕ್ರಮದ ನಿರೂಪಣೆ ಮಾಡಿದರು. ಭಜನೆ, ಅಮೃತ ವಾಚನ, ಪಂಚಾಂಗ ಪಠಣ ದೊಂದಿಗೆ ಯೋಗಾಭ್ಯಾಸ ಮಾಡಲಾಯಿತು. ಸುರೇಶ್ ಹನುಮ ಜಯಂತಿ ಬಗ್ಗೆ ಸವಿವಿವರವಾಗಿ ಬೌದ್ದಿಕ್ ನೀಡಿದರು. ಸಹ ಶಿಕ್ಷಕರಾದ ಗಣೇಶ್, ಸುಧಾಕರ, ಸುಕೇಶ್ ಹಾಗೂ ಸುಮಾರು 50ಕ್ಕೂ ಹೆಚ್ಚು ಯೋಗ ಬಂಧುಗಳು ಪಾಲ್ಗೊಂಡರು.









