






ಶಾಂತಿನಗರ ಹಾಲು ಉತ್ಪಾದಕರ ಸಹಕಾರ ಸಂಘ ಇಂದಬೆಟ್ಟು.(ನಿ.) ಇದರ ಮುಂದಿನ 5 ವರ್ಷದ ಅವಧಿಗೆ ಆಡಳಿತ ಮಂಡಳಿಯ ಚುನಾವಣೆಗೆ ನಾಮ ಪತ್ರ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.



ನೂತನವಾಗಿ ಆಯ್ಕೆಗೊಂಡ ಮಂಡಳಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಉಮೇಶ್ ಗೌಡ ಮತ್ತು ಉಪಾಧ್ಯಕ್ಷರು ಆಗಿದ್ದ ಪ್ರೇಮಲತಾ ಅವರನ್ನೇ ಮುಂದಿನ 5 ವರ್ಷದ ಅವಧಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಮರು ಚುನಾಯಿಸಲಾಯಿತು ಸಂಘದ ಆವರಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿಯಾಗಿ ರಿಟರ್ನಿಂಗ್ ಅಧಿಕಾರಿ ಬಿ ವಿ ಪ್ರತಿಮಾ ಭಾಗವಹಿಸಿ ಫಲಿತಾಂಶ ಘೋಷಣೆ ಮಾಡಿದರು.
ಸಂಜೀವ ಗೌಡ ಮನ್ನಡ್ಕ ಶಿವಪ್ರಸಾದ್ ಕೊಡಂಗೆ, ಕೆ. ಬೇಬಿ, ಕೆ. ಸುರೇಶ್, ರಾಜಶೇಖರ, ಪೂಜಶ್ರೀ, ರಾಜೇಶ್ ಗೌಡ ಅಲೆಕ್ಕಿ ಕನ್ಯಾಡಿ, ನೋಣಯ್ಯ ಗೌಡ ಕನ್ಯಾಡಿ, ಯತೀಶ್ ಗೌಡ, ಸುವರ್ಣಲತಾ ಕಡಿರುದ್ಯಾವರ ,ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದಂತೆ ಪರಿಶಿಷ್ಟ ಪಂಗಡ ಸ್ಥಾನಕ್ಕೆ ಯಾರು ಅಭ್ಯರ್ಥಿ ಇಲ್ಲದ ಕಾರಣ ಆ ಸ್ಥಾನ ಮೀಸಲಿರಿಸಲಾಗಿದೆ.









