ಎಸ್ ಡಿ ಯಂ ಪಾಲಿಟೆಕ್ನಿಕ್ – ಸ್ವಯಂ ಪ್ರೇರಿತ ರಕ್ತದಾನ ಶಿಬಿರ

0

ಉಜಿರೆ – 15 : ಎಸ್ ಡಿ ಯಂ ಪಾಲಿಟೆಕ್ನಿಕ್ ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಹಾಗೂ ಜೆ ಸಿ ಐ ಉಜಿರೆ ಸಿಟಿ ಇದರ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್, ಪುತ್ತೂರು ರಕ್ತನಿಧಿ ಘಟಕದಿಂದ ಏ.1ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ಶಿಬಿರವನ್ನು ಉದ್ಯಮಿ, ಜೆ ಸಿ ಐ ಉಜಿರೆ ಸಿಟಿ ಅಧ್ಯಕ್ಷ ಮಹಮ್ಮದ್ ಮಿರ್ಶಾದ್ ಅವರು ಉದ್ಘಾಟಿಸಿ, ರಕ್ತದಾನ ಶಿಬಿರ ಒಂದು ಜೀವ ಉಳಿಸುವ ಉದಾತ್ತ ಕಾರ್ಯ ರಕ್ತಕ್ಕೆ ಪರ್ಯಾಯವಿಲ್ಲ ಏಕೆಂದರೆ ಅದನ್ನು ಯಾವ ಕಾರ್ಖಾನೆಯಲ್ಲಿಯೂ ಉತ್ಪಾದಿಸಲಾಗುವುದಿಲ್ಲ. ಆದುದರಿಂದ ರಕ್ತದಾನಿ ಜೀವದಾನಿಯು‌ ಹೌದು ಎಂದು ಹೇಳಿದರು.

ಪುತ್ತೂರು ರೋಟರಿ ಕ್ಯಾಂಪ್ಲೋ ಬ್ಲಡ್ ಬ್ಯಾಂಕ್ ಹಿರಿಯ ವೈದ್ಯಾಧಿಕಾರಿ ಡಾ॥ ರಾಮಕೃಷ್ಣ ರಾವ್ ರಕ್ತದಾನದ ಮಹತ್ವವನ್ನು, ಯುವಜನತೆ ಸದೃಢರಾಗಬೇಕಾದಲ್ಲಿ ರಕ್ತದಾನಿಗಳಾಗಿರುವುದು ಅವಶ್ಯಕ, ರಕ್ತದಾನಿಗಳು‌ ಭಯ ಪಡುವ ಅಗತ್ಯವಿಲ್ಲ ಅದರಿಂದ ಯಾವುದೇ ತೊಂದರೆಯಿಲ್ಲ ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ತತ್ತಿಯಾಗುತ್ತದೆ, ಆರೋಗ್ಯ ಸುಧಾರಿಸುತ್ತದೆ ಸಾವುನೋವಿನಲ್ಲಿರುವ ಜನರಿಗೆ ಜೀವಾಧಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತದೆ ಎಂದು ವಿವರಿಸಿದರು.

ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್, ಮಾತನಾಡಿ ರಕ್ತದಾನ ಶ್ರೇಷ್ಟ ಕಾರ್ಯ. ನಮ್ಮ ಕಾಲೇಜಿನಲ್ಲಿ ವರ್ಷ ದಲ್ಲಿ ಎರಡು ಬಾರಿ ರಕ್ತದಾನ ಶಿಬಿರವನ್ನು ಆಯೋಜಿಸು ತ್ತೇವೆ. ಇಂದಿನ ಈ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಎನ್ ಯಸ್ ಯಸ್ ಯೋಜನಾಧಿಕಾರಿ ಪ್ರಕಾಶ್ ಗೌಡ, ವೈ ಆರ್ ಸಿ ಕಾರ್ಯಕ್ರಮಾಧಿಕಾರಿ ಅವನೀಶ್ ಪಿ ಉಪಸ್ಥಿತರಿದ್ದರು. ಒಟ್ಟು 43 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

LEAVE A REPLY

Please enter your comment!
Please enter your name here