ಎಕ್ಸಲೆಂಟ್ ಮೂಡುಬಿದ್ರೆ: ಮಹಾವೀರ ಜಯಂತಿ ಆಚರಣೆ

0

ಮೂಡುಬಿದಿರೆ: ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ಭಗವಾನ್ ಶ್ರೀ ಮಹಾವೀರ ಸ್ವಾಮಿಯ 2625 ನೇ ಜನ್ಮ ಕಲ್ಯಾಣ ಮಹೋತ್ಸವದ ಅಂಗವಾಗಿ ವರ್ಧಮಾನ ಮಹಾವೀರ ಶಾಂತಿ ಪ್ರಶಸ್ತಿ ಎಕ್ಸಲೆಂಟ್ 2026 ಕರ‍್ಯಕ್ರಮ ಭಕ್ತಿ ಭಾವ ಹಾಗೂ ಶ್ರಧ್ಧೆಯಿಂದ ನಡೆಯಿತು.

ವರ್ಧಮಾನ ಮಹಾವೀರ ಶಾಂತಿ ಪ್ರಶಸ್ತಿ ಎಕ್ಸಲೆಂಟ್ 2026 ಸ್ವೀಕರಿಸಿದ ಭರತೇಶ ವಿದ್ಯಾಸಂಸ್ಥೆ ಬೆಳಗಾವಿಯ ಕರ‍್ಯದರ್ಶಿಗಳಾದ ಡಾ.ವಿನೋದ್ ಸುರೇಂದ್ರ ದೊಡ್ಡಣ್ಣನವರ್ ವರ್ಧಮಾನ ಮಹಾವೀರ ತತ್ವಗಳಲ್ಲಿ ಪ್ರಮುಖವಾದ ಬದುಕು-ಬದುಕಲು ಬಿಡಿ ಎಂಬ ಸಂದೇಶವನ್ನು ವಿವರಿಸುತ್ತಾ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿರುವ ಇಂದಿನ ಸಮಾಜಕ್ಕೆ ಮಹಾವೀರರ ಅಹಿಂಸೆ ತತ್ವ ಮತ್ತು ಸಹಜೀವನದ ಸಂದೇಶ ಅತ್ಯಂತ ಪ್ರಸ್ತುತವಾಗಿದೆ ಎಂದು ಹೇಳಿದರು. ಪ್ರತೀ ಜೀವಿಗೂ ಬದುಕುವ ಹಕ್ಕು ಇರುವುದನ್ನು ಮನಗಂಡು ಹಿಂಸೆಯಿAದ ದೂರವಿದ್ದು ಶಾಂತಿಯ ಮಾರ್ಗವನ್ನು ಅನುಸರಿಸುವುದೇ ಮಹಾವೀರರ ನಿಜವಾದ ಉಪದೇಶ ಎಂದು ಹೇಳಿದರು. ದ್ಧಪ್ರಕೃತಿಯ ನಡುವೆ ಸಂಸ್ಕಾರಭರಿತ ಶಿಕ್ಷಣ ನೀಡುತ್ತಿರುವ ಎಕ್ಸಲೆಂಟ್‌ ಸಂಸ್ಥೆಯಲ್ಲಿ ಶಾಂತಿ, ಸೌಹಾರ್ದ ಮಾನವೀಯ ಮೌಲ್ಯಗಳು ಉಸಿರಾಡುತ್ತಿರುವುದು ಇಲ್ಲಿನ ಶಿಕ್ಷಣ ಪದ್ಧತಿಗೆ ಕನ್ನಡಿಯಾಗಿದೆ ಎಂದರು.

ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪ ಇಡುವಲ್ಲಿ, ಮಾನವ ಬದುಕಿನ ನೋವಿಗೆ ನಲಿವಿಗೆ ದನಿಗೂಡಿಸುವಲ್ಲಿ ನಾವು ತೊಡಗಿಸಿಕೊಂಡರೆ ಅದು ನಿಜಾರ್ಥದ ಮಹಾವೀರ ಜಯಂತಿ ಆಚರಣೆ. ಆ ನಿಟ್ಟಿನಲ್ಲಿ ಎಕ್ಸಲೆಂಟ್‌ ಮೂಡುಬಿದಿರೆ ಸಾರ್ಥಕ್ಯದ ದೀಪ ಹಚ್ಚಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಮೂಡುಬಿದಿರೆಯ ಅಧ್ಯಕ್ಷರಾದ ಯುವರಾಜ್‌ ಜೈನ್‌ ಹಿಂಸೆಯಿಲ್ಲದ ಹೃದಯದ ಮಿಡಿತವೇ ನಿಜವಾದ ಭಗವತ್‌ ಪೂಜೆ, ನಾವು ಉಸಿರಾಡುವುದರೊಂದಿಗೆ ಇನ್ನೊಬ್ಬರ ಉಸಿರಿಗೂ ಗೌರವ ಕೊಡುವುದು ಇನ್ನೊಬ್ಬರ ಕನಸುಗಳಿಗೆ ಜಾಗ ಕೊಡುವುದು. ಸಣ್ಣ ಚಿಟ್ಟೆಯ ಹಾರಾಟದಲ್ಲೂ ಜೀವವಿದೆ. ಎಂದು ಮೌನ ಪ್ರಾಣಿಯ ಕಣ್ಣಲ್ಲೂ ನೋವಿದೆ. ಅದನ್ನು ಅರಿಯುವ ಮನಸ್ಸೇ – ಮಹಾವೀರರ ಮಾರ್ಗ ನಾವು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ ಪ್ರತಿ ಜೀವಿಯಲ್ಲೂ ನಮ್ಮನ್ನೇ ಕಾಣೋಣ ಎಂದರು.

ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಮಹಾವೀರ ಪಾರ್ಶ್ವನಾಥ ಕುಂದೂರ್, ನಿರಂಜನ್ ಜೈನ್ ಕುದ್ಯಾಡಿ, ಅಳದಂಗಡಿ ಮಾಳ ಹರ್ಷೇಂದ್ರ ಜ್ಯೆನ್, ಕರ್ನಾಟಕದ ಮಾಜಿ ಸಚಿವರಾದ ಅಭಯಚಂದ್ರ ಜೈನ್ ಕರ‍್ಯಕ್ರಮವನ್ನು ಉದ್ಘಾಟಿಸಿದರು, ವಿಟ್ಲ ನವಿಲು ಬಸದಿಯ ಅಧ್ಯಕ್ಷರಾದ ಜಿತೀಶ್ ಎಂ ವೇದಿಕೆಯಲ್ಲಿ ಉಪಸ್ಥಿತರದ್ದರು, ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕರ‍್ಯದರ್ಶಿ ಶ್ರೀಮತಿ ರಶ್ಮಿತಾ ಜ್ಯೆನ್ ಸ್ವಾಗತಿಸಿ, ಉಪನ್ಯಾಸಕ ಸುನಾದ್‌ರಾಜ್ ಜ್ಯೆನ್ ವಂದಿಸಿದರು. ಉಪನ್ಯಾಸಕ ರಂಜಿತ್ ಜ್ಯೆನ್ ನಿರೂಪಿಸಿದರು.

LEAVE A REPLY

Please enter your comment!
Please enter your name here