







ಧರ್ಮಸ್ಥಳ : ಆದಿ ಪಜಿರಡ್ಕ ಶ್ರೀ ದೇವಲಿಂಗೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವದ ಸಂದರ್ಭ ಮಾ. 29 ರಂದು ಕಂಕನಾಡಿ ಗರೋಡಿ ಅಧ್ಯಕ್ಷರು, ಗುರುದೇವ ಮಠದ ಟ್ರಷ್ಟಿ ಚಿತ್ತರಂಜನ್ ಭೇಟಿ ನೀಡಿದರು.


ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸುಲೋಚಿನಿ ಚಿತ್ತರಂಜನ್, ಕಂಕನಾಡಿ ಗರೋಡಿ ಮತ್ತು ಶ್ರೀ ಸೂರ್ಯನಾರಾಯಣ ದೇವಸ್ಥಾನದ ಟ್ರಷ್ಟಿ ಚಂದ್ರನಾಥ್ ಅತ್ತಾವರ, ಮಂಗಳೂರು ಎಂ. ಪಿ. ಸಿಲ್ಕ್ಸ್ ಮಾಲಕ ಎಂ. ಪಿ. ದಿನೇಶ್, ಮಂಗಳೂರು ಕಾರ್ಪೋರೇಟರ್ ಕಿರಣ್ ಕೋಡಿಕಲ್ ಉಪಸ್ಥಿತರಿದ್ದರು.









