ಗೇರುಕಟ್ಟೆ ಕೇಶವ ಬಂಗೇರ ಅವರಿಗೆ ಪಿಎಚ್ ಡಿ ಪದವಿ

0

ಉಜಿರೆ : ಮಂಗಳೂರು ಕುದ್ರೋಳಿ ಶ್ರೀ ನಾರಾಯಣ ಗುರು ಕಾಲೇಜಿನ ಪ್ರಾಧ್ಯಾಪಕ ಕೇಶವ ಬಂಗೇರ ಬಿ. ಗೇರುಕಟ್ಟೆ ಅವರು ವಂಗಳೂರು ವಿಶ್ವ ವಿದ್ಯಾಲಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಪದವಿ ಲಭಿಸಿದೆ.”ತುಳು ರಂಗಭೂಮಿ ಮತ್ತು ಸಿನೆಮಾ: ಪ್ರೇರಣೆ ಮತ್ತು ಅನನ್ಯತೆ” ಕುರಿತು ಮಹಾ ಪ್ರಬಂಧ ಮಂಡಿಸಿದ್ದರು.

ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬಳೆ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಅಧ್ಯಯನ ನಡೆಸಿದ್ದರು. ಪ್ರಸ್ತುತ ಅವರು ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here