ತಾಲೂಕು ಪಂಚಾಯತಿ ಅಧೀಕ್ಷಕ ಡಿ ಪ್ರಶಾಂತ್ ಅವರಿಗೆ ಗೌರವ

0

ಉಜಿರೆ: ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಟಾನ ಸಮಿತಿಯ ಮಾಸಿಕ ಸಮಿತಿ ಸಭೆಯಲ್ಲಿ ಮಾರ್ಚ್ ಅಂತ್ಯದಲ್ಲಿ ಸೇವಾ ನಿವೃತ್ತಿ ಹೊಂದಲಿರುವ ತಾಲೂಕು ಪಂಚಾಯತಿಯ ಅಧೀಕ್ಷಕ ಡಿ ಪ್ರಶಾಂತ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಸಮಿತಿಯ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ರವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಇಲಾಖಾಧಿಕಾರಿಗಳು, ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಟಾನ ಸಮಿತಿಯ ಸದಸ್ಯೆ ಸೌಮ್ಯ ಲಾಯಿಲ, ಮೆರಿಟಾ ಪಿಂಟೋ, ವೀರಪ್ಪ ಮೊಯ್ಲಿ, ವಾಸುದೇವ ರಾವ್, ವಿಜಯಗೌಡ ಬೆಳಾಲು, ಶರೀಫ್ ಸಬರಬೈಲ್, ಕೆ.ನೇಮಿರಾಜ್ ಕಿಲ್ಲೂರು, ವಂದನಾ, ಸತೀಶ್ ಹೆಗ್ಡೆ, ಕೇಶವ ನಾಯ್ಕ್ ಹಾಗೂ ನೋಡೆಲ್ ಅಧಿಕಾರಿ ಹೆರಾಲ್ಡ್ ಸಿಕ್ವೇರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here