






ಉಜಿರೆ: ತುಳು ಶಿವಳ್ಳಿ ಸಭಾ ಉಜಿರೆ ವಲಯದ ಆಶ್ರಯದಲ್ಲಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಲೋಕದ ಶಾಂತಿ,ಸುಭಿಕ್ಷೆಗಾಗಿ ಪ್ರಾರ್ಥಿಸಿ ಮಾ 21 ರಂದು ಬೆಳಿಗ್ಗೆ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಮತ್ತು ಅರ್ಚಕ ರಾಮಚಂದ್ರ ಹೊಳ್ಳರ ನೇತೃತ್ವದಲ್ಲಿ ವೇದಮೂರ್ತಿ ವಾದಿರಾಜ ಶಬರಾಯರ ಆಚಾರ್ಯತ್ವದಲ್ಲಿ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮಾವಳಿ ಪಠಣದ ಮೂಲಕ ಲಕ್ಷ ತುಳಸಿ ಅರ್ಚನೆ ನಡೆಯಿತು.


ವಲಯಾಧ್ಯಕ್ಷ ಗಿರಿರಾಜ ಬಾರಿತ್ತಾಯ ಸಂಕಲ್ಪ ನೆರವೇರಿಸಿ ,ತಾಲೂಕಿನ ೫೦ಕ್ಕೂ ಅಧಿಕ ವಿಪ್ರ ಬಾಂಧವರು ಹಾಗೂ ವಟುಗಳು ಶ್ರೀ ವಿಷ್ಣು ಸಹಸ್ರನಾಮಾವಳಿ ಪಠಣ ದಲ್ಲಿ ಭಾಗವಹಿಸಿದ್ದರು. ಶ್ರೀ ಸ್ವಾಮಿಗೆ ವಿಶೇಷ ಪೂಜೆ ಬಳಿಕ ಪ್ರಸಾದ ವಿತರಿಸಲಾಯಿತು. ವಲಯದ ಮಹಿಳಾ ಸದಸ್ಯೆಯರು ಕೂಡಾ ಭಾಗವಹಸಿ ಶ್ರೀವಿಷ್ಣುಸಹಸ್ರ ನಾಮ ಪಠಣದಲ್ಲಿ ಪಾಲ್ಗೊಂಡಿದ್ದರು. ಕಾರ್ಯದರ್ಶಿ ಹರ್ಷಕುಮಾರ್ ಕೆದಿಲಾಯ ಸಹಕರಿಸಿದ್ದರು.









