ತುಳು ಶಿವಳ್ಳಿ ಉಜಿರೆ ವಲಯ ವಾರ್ಷಿಕ ಮಹಾಸಭೆ, ಲಕ್ಷ ತುಳಸಿ ಅರ್ಚನೆ,ಮಹಿಳಾ ದಿನಾಚರಣೆ ; ಜೀವನದಲ್ಲಿ ಜಾಗೃತೆಯಿಂದ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು : ಕೆಮ್ಮಣ್ಣು ಪ್ರಸನ್ನ ಆಚಾರ್

0

ಉಜಿರೆ: ದೇವರು ನಮಗೆ ಶಕ್ತಿ ಕೊಟ್ಟಿದ್ದಾರೆ. ಅದನ್ನು ನಾವು ವ್ಯರ್ಥವಾಗಿ ದುರುಪಯೋಗಿಸದೆ ನಿರಂತರ ಧ್ಯಾನ,ದೇವರ ನಾಮಸ್ಮರಣೆ ಮಾಡುವ ಮೂಲಕ ನಾವು ದೇವರಿಗೆ ಕೃತಜ್ಞರಾಗಿರಬೇಕು.

ಜನಾರ್ದನ ಸ್ವಾಮಿಗೆ ಅತಿಪ್ರಿಯವಾದ ವಿಷ್ಣು ಸಹಸ್ರನಾಮ ಪಠಣ, ಅರ್ಚನೆಯೇ ಶ್ರೇಷ್ಠ ಸೇವೆ. ತುಳಸಿಯಷ್ಟು ಪವಿತ್ರ ಬೇರೋಂದಿಲ್ಲ. ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಎಲ್ಲರೋಗಗಳಿಗೆ ಪರಿಹಾರ.ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗದೆ ವೇಷಭೂಷಣ,ಸಂಸ್ಕೃತಿಯಲ್ಲಿ ಭಾರತೀಯತೆಯನ್ನು ಪಾಲಿಸಬೇಕು. ಉತ್ತಮ ಸಂಸ್ಕಾರ,ಸಂಸ್ಕೃತಿಯನ್ನು ಜೀವನದಲ್ಲಿ ಜಾಗೃತೆಯಿಂದ ಅಳವಡಿಸಿಕೊಳ್ಳಬೇಕು ಎಂದು ಜ್ಯೋತಿಷ್ಯ ವಿದ್ವಾನ್ ಕೆಮ್ಮಣ್ಣು ಪ್ರಸನ್ನ ಆಚಾರ್ ನುಡಿದರು.

ಅವರು ಮಾ 21 ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ತುಳು ಶಿವಳ್ಳಿ ಸಭಾ ಉಜಿರೆ ವಲಯದ ವಾರ್ಷಿಕ ಮಹಾಸಭೆ,ಲಕ್ಷತುಳಸಿ ಅರ್ಚನೆ ಹಾಗು ಮಹಿಳಾ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದರು.

ನಾವು ಹಿಂದೂ ಬ್ರಾಹ್ಮಣರೆಂಬ ದೃಢ ನಿಲುವಿನಿಂದ ಮಧ್ವ ಪರಂಪರೆಯ ಗೋಪಿ ನಾಮಧಾರಣೆ, ಗಾಯತ್ರಿ ಮಂತ್ರ, ವಿಷ್ಣು ಸಹಸ್ರನಾಮ ಪಾರಾಯಣ,ದಾಸರ ಪದಗಳ ಭಜನೆ, ಮುದ್ರಾಧಾರಣೆ ,ಏಕಾದಶಿ ಉಪವಾಸ ವೃತಾಚರಣೆ ನಡೆಸುವುದು ಅತ್ಯವಶ್ಯ. ಏಕಾದಶಿ ಉಪವಾಸ ಆಚರಣೆ ವೈದ್ಯಕೀಯವಾಗಿಯೂ ಆರೋಗ್ಯದಾಯಕ. ಪ್ರತಿಯೊಬ್ಬರೂ ಕುಲನಾಮದಿಂದ ಕುಲದೇವರ ಸ್ಮರಣೆ, ಗುರುಮಠಗಳಿಗೆ ತೆರಳಿ ಗುರುಕಾ ಣಿಕೆ ಸಲ್ಲಿಸಿ ಮಂತ್ರಾಕ್ಷತೆ ಪಡೆಯುವುದು ಶ್ರೇಯಸ್ಕರ. ಮಧ್ವರ ಜನ್ಮಭೂಮಿ ಪಾಜಕ ಕ್ಷೇತ್ರಕ್ಕೆ ಪ್ರವಾಸ ಹಾಗು ಮಧ್ವರು ನಡೆದಾಡಿದ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಭಕ್ತಿಯಿಂದ ದೇವರ ಪೂಜೆ ಮಾಡುವುದರಿಂದ ಮೋಕ್ಷ ಪಡೆದು ಜೀವನದ ಸಾರ್ಥಖ್ಯ ಪಡೆಯಲು ಪ್ರಯತ್ನಿಸಬೇಕೆಂದು ನುಡಿದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ, ತಾಲೂಕು ಅಧ್ಯಕ್ಷ ರಾಜ ಪ್ರಸಾದ ಪೋಲ್ನಾಯ , ತಾಲೂಕು ಮಹಿಳಾ ಘಟಕಾಧ್ಯಕ್ಷೆ ಜಯಾ ಅನಂತಕೃಷ್ಣ ಆರ್ಮುಡತ್ತಾಯ , ಉಜಿರೆ ವಲಯ ಮಹಿಳಾ ಘಟಕ ಅಧ್ಯಕ್ಷೆ ಜ್ಯೋತಿ ಗುರುರಾಜ್.ಕಾರ್ಯದರ್ಶಿ ಶೈಲಜಾ ಪೆಜತ್ತಾಯ, ಉಪಸ್ಥಿತರಿದ್ದರು. ಅಗಲಿದ ಸಮಾಜ ಬಾಂಧವರಿ ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಲಯದ ವಾರ್ಷಿಕ ವರದಿಯನ್ನು ಮುಖ್ಯ ಅತಿಥಿಗಳು ಬಿಡುಗಡೆಗೊಳಿಸಿದರು. ಡಾ|ಗಿರೀಶ್ ಕುಮಾರ್, ಜನಾರ್ದನ ತೋಳ್ಪಡಿತ್ತಾಯ ಮತ್ತು ಜ್ಯೋತಿ ಗುರುರಾಜ್ ಅತಿಥಿಗಳನ್ನು ಪರಿಚಯಿಸಿದರು. ವಲಯ ಕಾರ್ಯದರ್ಶಿ ಹರ್ಷಕುಮಾರ್ ಕೆದಿಲಾಯ ವಾರ್ಷಿಕ ವರದಿ, ಕೋಶಾಧಿಕಾರಿ ಪ್ರಕಾಶ್ ಕುದ್ದಣ್ಣಾಯ ವಾರ್ಷಿಕ ಲೆಕ್ಕಪತ್ರ ಮಂಡಿಸಿ,ಅನುಮೋದಿಸಲಾಯಿತು. ಉಪಾಧ್ಯಕ್ಷ ಸೂರ್ಯನಾರಾಯಣ ಕೊರ್ನಾಯ ಸ್ವಾಗತಿಸಿ, ವಾಣಿ ಸಂಪಿಗೆತ್ತಾಯ ಮತ್ತು ಗಾಯತ್ರಿ ಶ್ರೀಧರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಉಪಾಧ್ಯಕ್ಷೆ ವೃಂದಾ ಪಡುವೆಟ್ನಾಯ ವಂದಿಸಿದರು. ಮಹಿಳಾ ಘಟಕದ ವತಿಯಿಂದ ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಃಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು

LEAVE A REPLY

Please enter your comment!
Please enter your name here