ಮಾಳವಿಕಾ ಶ್ರೀನಿವಾಸ್ ರಾವ್ ರಿಂದ “ಸೇವಾಧಾಮ”ಕ್ಕೆ ಗಾಲಿಕುರ್ಚಿಗೆ ದೇಣಿಗೆ

0

ಉಜಿರೆ: : ಕೊಕ್ಕಡದ ಶ್ರೀಮತಿ ಮಾಳವಿಕಾ ಶ್ರೀನಿವಾಸ್ ರಾವ್ ರವರು ಮಾರ್ಚ್ 15 ರಂದು ಸೌತಡ್ಕದಲ್ಲಿರುವ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ “‘ಸೇವಾಧಾಮ”’ಕ್ಕೆ ಭೇಟಿ ನೀಡಿ, ಒಂದು ಗಾಲಿಕುರ್ಚಿಗೆ ಅಗತ್ಯವಿರುವ ರೂ.15,000/- ಮೊತ್ತವನ್ನು ಧನಸಹಾಯವಾಗಿ ನೀಡಿ ಸಹಕರಿಸಿದ್ದಾರೆ.

ಸೇವಾಭಾರತಿ ಅಧ್ಯಕ್ಷ ವಿನಾಯಕ ರಾವ್ ಸಂಸ್ಥೆಯ ಪರವಾಗಿ ದೇಣಿಗೆಯನ್ನು ಸ್ವೀಕರಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದರು . ನಿವೃತ್ತ ಮಹಿಳಾ ಆರೋಗ್ಯ ಸಂದರ್ಶಕರು ಹಾಗೂ ಸೇವಾಭಾರತಿ ಪಾಶ್ ಕಮಿಟಿ ಅಧ್ಯಕ್ಷೆ ವಸಂತಿ ಗೌಡ, ಟ್ರಸ್ಟಿ ಸ್ವರ್ಣಗೌರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here