






ಬೆಳ್ತಂಗಡಿ: ಜೀವರಾಶಿಗಳಿಗೆ ಆಶ್ರಯತಾಣವಾಗಿರುವ, ಪ್ರಕೃತಿ ರಮಣೀಯ ಗುರುವಾಯನಕೆರೆಯ ಬೃಹತ್ ಕೆರೆಯಲ್ಲಿ ಮಾ.೬ರಂದು ಮೀನುಗಳು ಸತ್ತು ತೇಲುತ್ತಿರುವುದು ಕಂಡುಬಂದಿದ್ದು, ಕೆರೆ ನೀರು ಮಲಿನಗೊಂಡಿರುವುದು ಮತ್ತೊಮ್ಮೆ ಸಾರ್ವಜನಿಕ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಿಧಿಕಾರಿಗೆ ದೂರು ನೀಡಿದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿಯ ಮಹೇಶ್ವರಿ ಅವರು ಮಾ.೧೬ರಂದು ಸಂಜೆ ೬ ಗಂಟೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಇದೇ ವೇಳೆ ಕೆರೆ ಮಾಲಿನ್ಯ ತಡೆಗೆ ಗುರುವಾಯನಕೆರೆಯ ಕುವೆಟ್ಟು ಗ್ರಾಮ ಪಂಚಾಯತ್ ಏನೆಲ್ಲಾ ಕ್ರಮ ಕೈಗೊಂಡಿದೆ ಮತ್ತು ಕೈಗೊಳ್ಳಲಿದೆ ಎಂದು ಸ್ಥಳದಲ್ಲಿದ್ದ ಸ್ಥಳೀಯರು ಚರ್ಚಿಸುತ್ತಿದ್ದರು.
ಪರಿಸರಾಧಿಕಾರಿ ಭೇಟಿ ಸಂದರ್ಭದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಬ್ಬಂದಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ತಹಾಶೀಲ್ದಾರ್ ಪೃಥ್ವಿ ಸಾನಿಕಂ, ಗುರುವಾಯನಕೆರೆಯ ಉದ್ಯಮಿಗಳು, ಸಾರ್ವಜನಿಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕೆರೆ ರಕ್ಷಣೆಯ ಇಚ್ಛಾಶಕ್ತಿ ಇಲ್ಲವೇ?: ಗುರುವಾಯನ ಕೆರೆಯ ಕೆರೆಯಲ್ಲಿ ಮೀನುಗಳು ಸಾಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಮೀನುಗಳು ಸತ್ತು ಸಾಕಷ್ಟು ಸುದ್ದಿಯಾಗಿತ್ತು. ಆದರೆ, ಅಂದಿನಿಂದ ಇಂದಿನವರೆಗೆ ಕೆರೆ ಹೂಳೆತ್ತುವ ಬಗ್ಗೆಯಾಗಲೀ, ಮಲಿನಕಾರಕ ಅಂಶಗಳು ನೀರು ಸೇರದಂತೆ ನೋಡಿಕೊಳ್ಳುವ ಕುರಿತು ಗಂಭೀರ ಕ್ರಮ ಕೈಗೊಳ್ಳಲು ಆಡಳಿತ ವ್ಯವಸ್ಥೆ ಚಿಂತನೆ ನಡೆಸದಿರುವುದು ವಿಪರ್ಯಾಸ. ಕೆರೆ ಮಾಲಿನ್ಯ ವಿಷಯದಲ್ಲಿ ಆರೋಪ/ಪ್ರತ್ಯಾರೋಪಗಳು ಕೇಳಿಬರುತ್ತವೆಯೇ ವಿನಃ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವುದು ಯಾವಾಗ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಕಳೆದ ವರ್ಷ ಉಪಲೋಕಾಯುಕ್ತ ಡಿ. ವೀರಪ್ಪ ಅವರು ಬೆಳ್ತಂಗಡಿ ಭೇಟಿ ಸಂದರ್ಭದಲ್ಲಿ ಕೆರೆಯತ್ತ ತೆರಳಿ ಸ್ಥಳ ಪರಿಶೀಲನೆ ಮಾಡಿದ್ದರು. ಆದರೆ, ಭೇಟಿ ನಂತರ ಇದಕ್ಕೆ ಸಂಬಂಧಿಸಿ ಏನಾದರೂ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ್ದರೆ/ಇಲ್ಲವೇ ಎಂಬ ಖಚಿತ ಮಾಹಿತಿ ಇನ್ನೂ ಸಿಕ್ಕಿಲ್ಲ.
ಕ್ರಮ ಕೈಗೊಳ್ಳಲಾಗುವುದು: ಮೀನುಗಳ ಸಾವಿನ ಸುದ್ದಿ ಗೊತ್ತಾದಾಗ ತಹಶೀಲ್ದಾರ್ ಜೊತೆಯಲ್ಲಿ ಮಧ್ಯಾಹ್ನ ಭೇಟಿ ನೀಡಿ ವಿಚಾರಿಸಿzವು. ನಂತರ ಮಾಲಿನ್ಯ ನಿಯಂತ್ರಣ ಮಂಡಳಿಯವರಿಗೆ ತಿಳಿಸಿದಾಗ ಮಂಡಳಿಯ ಪರಿಸರಾಧಿಕಾರಿ ಮಹೇಶ್ವರಿ ಅವರೂ ಸಹ ಬಂದು, ಕೆರೆಯ ಎರಡು ಬದಿಯ ನೀರಿನ ಸ್ಯಾಂಪಲ್ ಮತ್ತು ಕಾಲೇಜಿನ ಕೊಳಚೆ ನೀರು ಕೆರೆಗೆ ಸೇರುವ ಜಾಗದಲ್ಲಿರುವ ನೀರಿನ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಯಿದೆ. ೬ ತಿಂಗಳ ಹಿಂದೆಯೂ ಇದೇ ರೀತಿಯ ಘಟನೆ ನಡೆದಿzಗ ಅದರ ವರದಿಯನ್ನು ಸಂಬಂಧಪಟ್ಟವರಿಗೆ ನೀಡಿದ್ದರು. ಈಗಲೂ ಸಹ ಕಾಲೇಜಿಗೆ ಸಂಬಂಧಿಸಿದ ಕೊಳಚೆ ನೀರು ಗುರುವಾಯನಕೆರೆಯನ್ನು ಸೇರುತ್ತಿರುವುದು ಕಂಡುಬಂದಿದೆ. ಸಾರ್ವಜನಿಕರು ಹಾಗೂ ಗ್ರಾಮಸ್ಥರು ಕೂಡ ಕಾಲೇಜಿನ ಕೊಳಚೆ ನೀರು ಕೆರೆ ಸೇರುವುದರಿಂದ ಹೀಗಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲು ತಿಳಿಸಲಾಗಿದೆ. ಘಟನೆಯ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯವರು ಮೇಧಿಕಾರಿಗೆ ತಿಳಿಸಿ ಕ್ರಮ ವಹಿಸುತ್ತಾರೆ. – ಭವಾನಿ ಶಂಕರ್ ಇಒ, ತಾಲೂಕು ಪಂಚಾಯತ್


ಕೆರೆ ಸಂರPಣೆ ನಮ್ಮ ಹೊಣೆ: ಮೀನುಗಳು ಸತ್ತಿರುವುದನನ್ನು ಗಮನಿಸಿzವೆ. ಕಾಲೇಜಿನ ಎಸ್.ಟಿ.ಪಿ.ಯಿಂದ ನೀರನ್ನು ಕೆರೆಗೆ ಬಿಡುತ್ತಿಲ್ಲ. ನಮಗೆ ಪದೇಪದೇ ಪಂಚಾಯತ್ನಿಂದ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಚನೆಗಳು ಬರುತ್ತಿದ್ದು, ನಾವು ಜಾಗೃತೆ ವಹಿಸುತ್ತಿzವೆ. ಗುರುವಾಯನಕೆರೆಯಿಂದಾಗಿ ಎಕ್ಸೆಲ್ ಕಾಲೇಜಿಗೆ ಜೀವಂತಿಕೆ ಇರುವುದರಿಂದ ಕೆರೆಯ ಸಂರPಣೆ ನಮ್ಮ ಹೊಣೆಯಾಗಿದೆ. ಈಗಾಗಲೇ ಕಾಲೇಜಿನಲ್ಲಿ ೫ ಲP ಲೀಟರ್ ಸಾಮರ್ಥ್ಯದ ಎಸ್.ಟಿ.ಪಿ. ಇದೆ. ಉಳಿದ ಹೆಚ್ಚುವರಿ ನೀರನ್ನು ಪಡಂಗಡಿಯಲ್ಲಿರುವ ನಮ್ಮ ಖಾಸಗಿ ಜಮೀನಿಗೆ ಬಿಡುತ್ತಿzವೆ. ಏಪ್ರಿಲ್ ೩೦ರಿಂದ ಮೇ.೧೫ರ ಒಳಗಾಗಿ ಹೊಸ ೨೦ ಲP ಲೀಟರ್ ಸಾಮರ್ಥ್ಯದ ಎಸ್.ಟಿ.ಪಿ. ಘಟಕದ ನಿರ್ಮಾಣವಾಗಲಿದೆ. ಕಾಲೇಜಿಗೆ ಸಂಬಂಧಿಸಿದ ಕೊಳಚೆ ನೀರು ಕೆರೆಯನ್ನು ಸೇರಿ ಮೀನುಗಳು ಸತ್ತಿರುವುದಿಲ್ಲ ಎಂಬುದು ನಮ್ಮ ಅಭಿಪ್ರಾಯ.
-ಡಾ. ಪ್ರಜ್ವಲ್ ಕಜೆ ಪ್ರಾಂಶುಪಾಲರು, ಅರಮಲೆಬೆಟ್ಟ ಕ್ಯಾಂಪಸ್ ಎಕ್ಸೆಲ್ ಕಾಲೇಜು
ತೆಪ್ಪದ ಮೂಲಕ ತೆರವು: ಸತ್ತು ತೇಲುತ್ತಿದ್ದ ಸುಮಾರು ೧೫ ಕೆ.ಜಿ. ತೂಗುವ ಎರಡು ಮೀನುಗಳು ಸೇರಿದಂತೆ ೭೦-೮೦ ಕೆ.ಜಿ.ಯಷ್ಟು ಮೀನುಗಳನ್ನು ಮಾ.೧೮ರಂದು ತೆಪ್ಪದ ಮೂಲಕ ತೆರವು ಮಾಡಲಾಯಿತು.
ಮೇಲಕ್ಕೆ ತಂದ ಸತ್ತ ಮೀನುಗಳನ್ನು ಹೊಂಡ ತೆಗೆದು ಯಾವುದೇ ರೋಗ ರುಜಿನಗಳು ಬಾರದಂತೆ ಮೀನುಗಳ ಮೇಲೆ ಉಪ್ಪು ಹಾಗೂ ಕೆಮಿಕಲ್ ಹಾಕಿ ಮಣ್ಣಿನಲ್ಲಿ ಹೂತು ಹಾಕಲಾಯಿತು. ಪುದುವೆಟ್ಟಿನ ತಂಡದಿಂದ ತೆಪ್ಪವನ್ನು ಪಂಚಾಯತ್ ಮೂಲಕ ವ್ಯವಸ್ಥೆ ಮಾಡಲಾಗಿತ್ತು.
ತನಿಖೆ ಮಾಡಿ, ಕ್ರಮ ಕೈಗೊಳ್ಳಿ: ಮೀನು ಹಿಡಿಯಲು ಪಂಚಾಯತ್ನಿಂದ ಅನುಮತಿ ಪಡೆದುಕೊಂಡ ಮೀನು ವ್ಯಾಪಾರಿ ರಿಯಾದ್ ಎಂಬವರು ಇಲ್ಲಿನ ಮೀನುಗಳ ಸಾವಿಗೆ ಕಾರಣವೇನೆಂಬುದರ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಕುವೆಟ್ಟು ಗ್ರಾಮ ಪಂಚಾಯತ್ಗೆ ದೂರು ಸಲ್ಲಿಸಿದ್ದಾರೆ. ಮೀನು ವ್ಯಾಪಾರಿ ರಿಯಾದ್ ಗ್ರಾ.ಪಂ. ಏಲಂನಲ್ಲಿ ಭಾಗವಹಿಸಿ ಮೂರು ವರ್ಷಗಳ ಖಾಯಂ ಅವಧಿಗೆ ರೂ. ೬ ಲಕ್ಷ ನೀಡಿ ಅನುಮತಿ ಪಡೆದುಕೊಂಡಿದ್ದರು. ಆದರೆ ಮಂಗಳವಾರ ರಿಯಾದ್ ಅವರು ಮೀನು ಹಿಡಿಯಲು ಕೆರೆಗೆ ಹೋದಾಗ ಮೀನುಗಳು ಅಲ್ಲಲ್ಲಿ ಸತ್ತು ತೇಲುತ್ತಿರುವುದು ಕಂಡು ಬಂತು. ಮೀನುಗಳ ಸಾವಿನಿಂದ ಅಪಾರ ನಷ್ಟ ಉಂಟಾಗುವ ಸಾಧ್ಯತೆ ಇದೆ. ಮೀನುಗಳು ಸಾಯಲು ನಿಖರ ಕಾರಣವೇನೆಂದು ತಿಳಿದು ಬಂದಿಲ್ಲ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ನಷ್ಟ ಭರಿಸಿಕೊಡುವಂತೆ ಕುವೆಟ್ಟು ಗ್ರಾಮಪಂಚಾಯತ್ ಆಡಳಿತಕ್ಕೆ ಲಿಖಿತ ದೂರು ನೀಡಿದ್ದಾರೆ.
ಅಧಿಕಾರಿಗಳೇ ನೇರ ಹೊಣೆ: ಮೀನುಗಳು ಸತ್ತಿರುವುದಕ್ಕೆ ಎಕ್ಸೆಲ್ ಕಾಲೇಜಿನವರು ಕೆರೆಗೆ ಬಿಡುತ್ತಿರುವ ಕೊಳಚೆ ನೀರೇ ಕಾರಣ. ಕಾಲೇಜಿನವರು ಎಸ್.ಟಿ.ಪಿ. ಘಟಕವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಸಮಸ್ಯೆ ಸರಿಪಡಿಸುತ್ತಿಲ್ಲ. ನಮಗೆ ಕಾಲೇಜಿನವರ ಮೇಲೆ ವೈಯುಕ್ತಿಕ ದ್ವೇಷ ಇಲ್ಲ. ಕೆರೆಯಲ್ಲಿ ಮೀನುಗಳು ಆಮ್ಲಜನಕಕ್ಕೆ ಹಾತೊರೆಯುವುದು ಕಂಡುಬರುತ್ತಿದೆ. ಅಧಿಕಾರಿಗಳು ಬರುವಾಗ ಎಸ್.ಟಿ.ಪಿ.ಯಿಂದ ಕೆರೆಗೆ ನೀರು ಬಿಡುವುದನ್ನು ನಿಯಂತ್ರಣ ಮಾಡುತ್ತಾರೆ. ಬಳಿಕ ಮತ್ತೆ ಕೆರೆಗೆ ಕೊಳಚೆ ನೀರು ಬಿಡುತ್ತಾರೆ. ಇಲ್ಲಿ ದೊಡ್ಡ ದೊಡ್ಡ ಕ್ಯಾಟ್ಲಕ್ ಮೀನುಗಳು ಸತ್ತಿವೆ. ಕಳೆದ ಬಾರಿಯೂ ಅಧಿಕ ಪ್ರಮಾಣದಲ್ಲಿ ಮೀನುಗಳು ಸತ್ತಾಗ ಮಾಲಿನ್ಯ ನಿಯಂತ್ರಣ ಮಂಡಳಿಯವರು ತನಿಖೆ ನಡೆಸಿ ವರದಿ ಸಲ್ಲಿಸಿದ್ದರೂ ಇಲ್ಲಿಯ ಕುವೆಟ್ಟು ಪಂಚಾಯತ್ನ ಪಿಡಿಒ ಅವರು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಪಂಚಾಯತ್ನವರು ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳ ಮಧ್ಯೆಯೇ ಗೊಂದಲ ಇರುವುದರಿಂದ ಅಧಿಕಾರಿಗಳೇ ಇದಕ್ಕೆ ನೇರ ಹೊಣೆ. – ಶಶಿರಾಜ್ ಶೆಟ್ಟಿ, ಸಾರ್ವಜನಿಕರು








