ಬೆಳಾಲಿನಲ್ಲಿ ಕೃಷ್ಣ ಆಗ್ರೋ ಕೇರ್ ಶುಭಾರಂಭ

0

ಬೆಳಾಲು : ಬೆಳಾಲಿನ ಸೇವಾ ಸಹಕಾರ ಸಂಘದ ಹಳೆ ಸೊಸೈಟಿ ಕಟ್ಟಡ ಬಿ ಎಸ್ ಎನ್ ಎಲ್ ಕಚೇರಿ ಸಮೀಪದಲ್ಲಿ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ರಿಪೇರಿ ಸಂಸ್ಥೆ ಕೃಷ್ಣ ಆಗ್ರೋ ಕೇರ್ ಮಾ.20ರಂದು ಶುಭಾರಂಭಗೊಂಡಿತು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟನ್ನಾಯ ಉದ್ಘಾಟನೆ ನೆರವೇರಿಸಿದರು.ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಅರಿಕೋಡಿ ದೀಪ ಬೆಳಗಿಸಿ ಉದ್ಘಾಟಟಿಸಿದರು.

ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಬೆಳಾಲು ಸೇವಾ ಸಹಕಾರ ಸಂಘದ ಅಧ್ಯಕ್ಷ ಹೆಚ್. ಪದ್ಮ ಗೌಡ, ಅನಂತೋಡಿ ಶ್ರೀ ಅನಂತ ಪದ್ಮನಾಭಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ, ಬೆಳಾಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ದಿನೇಶ್ ಕೋಟ್ಯಾನ್,ಎಸ್. ಲಕ್ಷ್ಮಣ ಗೌಡ, ಬೆಳಾಲು ಸಹಕಾರ ಸಂಘದ ಸಿಇಓ ನಾರಾಯಣ ಗೌಡ, ನಿರ್ದೇಶಕರುಗಳಾದ ದಾಮೋದರ ಗೌಡ ಸುರುಳಿ, ರಾಜಪ್ಪ ಗೌಡ ಪುಚ್ಚೆಹಿತ್ಲು, ರಮೇಶ್ ಗೌಡ ಅಂಗಡಿಬೆಟ್ಟು, ಶೇಖರ ಗೌಡ ಕೊಲ್ಲಿಮಾರು, ಮಾಜಿ ನಿರ್ದೇಶಕ ವಿಜಯ ಗೌಡ ಸೌತೆಗದ್ದೆ, ಸುಲೈಮಾನ್ ಭೀಮಂಡೆ,ನಿವೃತ್ತ ಸಿಇಓ ಪಿ. ರುಕ್ಮಯ್ಯ ಗೌಡ, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಗೌಡ ಮಾಯ, ಬೆಳಾಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಾಧವ ಗೌಡ, ಯಕ್ಷಗಾನ ಕಲಾವಿದ ಪಿ. ಲಕ್ಷ್ಮಣ ಗೌಡ, ಬಿರ್ಮಣ ಪೂಜಾರಿ ಪೆಲತ್ತಡಿ ಇನ್ನಿತರ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ಆಡಳಿತ ಪಾಲುದಾರರಾದ ದಯಾನಂದ ಪಿ. ಬೆಳಾಲು, ರಾಧಾ ದಯಾನಂದ, ಡಾ. ಚೇತನ್, ಡಾ. ಸೌಮ್ಯ, ಕಾರ್ಯನಿರ್ವಾಹಣಾಧಿಕಾರಿ ವಿಶ್ವನಾಥ ಪೂಜಾರಿ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here