







ಬೆಳ್ತಂಗಡಿ: ಮಾರ್ಚ್ 10 ರಂದು ರಾತ್ರಿ ಉಜಿರೆ ದೇವಸ್ಥಾನದ ಬೃಹ್ಮಕಲಶೋತ್ಸವಕ್ಕೆ ಸಹಪಾಠಿಗಳೊಂದಿಗೆ ತೆರಳಿದ ಉಜಿರೆ ಎಸ್ ಡಿ ಎಂ ಕಾಲೇಜಿನ ಪ್ರಥಮ ಪಿ ಯೂ ಸಿ ಯ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೊಬ್ಬನಿಗೆ ಉಜಿರೆಯ ಭಜರಂಗದಳದ ಸದಸ್ಯರು ಸಹಪಾಠಿಗಳೊಂದಿಗೆ ಜಾತ್ರೆಯಲ್ಲಿ ಮನರಂಜನೆ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಧರ್ಮ ಯಾವುದು ಎಂದು ಪ್ರಶ್ನಿಸಿ ಬಾಲಕನ ಮೇಲೆ ಮುಗಿಬಿದ್ದು ಕ್ರೂರವಾಗಿ ಹಲ್ಲೆ ನಡೆಸಿದರು. ಜೊತೆಯಾಗಿ ಬಂದಿದ್ದ ಸಹಪಾಠಿಗಳು ರಕ್ಷಣೆಗೆ ಬಂದರೂ ಅವರಿಗೆ ಕೂಡಾ ಹಲ್ಲೆ ನಡೆಸಿದರು.ಜಾತ್ರೆಯ ಜನಸಂದನಿಯಿಂದ ಮತ್ತೆ ಸ್ವಲ್ಪ ದೂರ ಹೋಗಿ ಅಲ್ಲಿಯೂ ಹಲ್ಲೆ ನಡೆಸಿ ಮೊಬೈಲನ್ನು ಬಲವಂತವಾಗಿ ಕಸಿದುಕೊಂಡು ಹಲ್ಲೆ ನಡೆಸುತ್ತಿದ್ದಾಗ, ಪ್ರಚೋದನಕಾರರು ಗುಂಪು ಹಲ್ಲೆ ನಡೆಸಿದರು.ಅಲ್ಲಿಂದ ಮತ್ತೆ ಪೋಲಿಸರು ಬಂದಿದ್ದಾರೆಂದು ಹಲ್ಲೆಕೋರರು ಬಾಲಕನನ್ನು ರಾತ್ರಿ 11:30 ಗಂಟೆಗೆ ಆರೋಪಿಗಳ ಬೈಕ್ ನ ಮಧ್ಯದಲ್ಲಿ ಕೂರಿಸಿಕೊಂಡು ಜಾತ್ರೆಯಿಂದ ಅಪಹರಿಸಿ ಆರೋಪಿಗಳೊಂದಿಗೆ ಗುಂಪು ಹಲ್ಲೆ ನಡೆಸಿದ ಇತರರು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಐದು ಕಿಲೋಮೀಟರ್ ದೂರದ ಗುಡ್ಡಗಾಡಿನ ಸ್ಥಳಕ್ಕೆ ಕರೆದೊಯ್ದು ಅಮಾನುಷವಾಗಿ ಹಲ್ಲೆ ನಡೆಸಿ ಮಧ್ಯರಾತ್ರಿ ಉಜಿರೆಯ ಪೇಟೆಯಲ್ಲಿ ಬಿಟ್ಟುಹೋಗಿದ್ದಾರೆ.


ಮನೆಗೆ ಬಂದ ಬಳಿಕ ಜೀವ ಭಯದಿಂದ ಪೋಷಕರಿಗೆ ವಿಷಯ ತಿಳಿಸಿಲ್ಲ, ಮಾರನೇ ದಿನ ಮತ್ತೆ ಆರೋಪಿಗಳು ಬಾಲಕನಿಗೆ ಮೊಬೈಲ್ ಕರೆಮಾಡಿ ನಿನ್ನ ಮೊಬೈಲ್ ಪರಿಶೀಲಿಸಿ ವಿಚಾರಣೆ ನಡೆಸಲಿಕ್ಕಿದೆ, ನಾವು ಹಲ್ಲೆ ನಡೆಸಿದ ವಿಷಯ ಯಾರಿಗಾದರೂ ತಿಳಿಸಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ನಿರಂತರ ಒಂದು ವಾರದ ಕಾಲ ಕರೆಮಾಡಿ ಬೆದರಿಸುತ್ತಿದ್ದರು.ಇದರಿಂದ ಬಾಲಕನು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ನಡೆಸಲು ಡೆತ್ ನೋಟ್ ಬರೆದಿಟ್ಟಿದ್ದ ವಿಷಯವು ಪೋಷಕರಿಗೆ ತಿಳಿದು ಪೋಲಿಸ್ ಠಾಣೆಗೆ ದೂರು ನೀಡಿದರು.ಘಟನಾ ದಿನ ಜಾತ್ರೆಯಲ್ಲಿ ಬಂದೋಬಸ್ತ್ ನಲ್ಲಿದ್ದ ಪೋಲಿಸರ ನಿರ್ಲಕ್ಷ್ಯದಿಂದಭಜರಂಗದಳದ ಗೂಂಡಾಗಳು ಈ ಅಪ್ರಾಪ್ತ ಬಾಲಕನನ್ನು ಅಮಾನುಷವಾಗಿ ಹಲ್ಲೆ ನಡೆಸಿ,ಅಪಹರಿಸಿ,ಗುಂಪು ಹಲ್ಲೆ ನಡೆಸಿ,ಧಾರ್ಮಿಕ ನಿಂದನೆ ಮಾಡಿ, ವೀಡಿಯೋ ನಡೆಸಿ, ನಿರಂತರ ಮೊಬೈಲ್ ನಲ್ಲಿ ಜೀವ ಬೆದರಿಕೆ ಒಡ್ಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿ,ನೈತಿಕ ಪೋಲಿಸ್ ಗಿರಿ ನಡೆಸಿದ ಈ ಅಮಾನವೀಯ ಘಟನೆಯು ಖಂಡನೀಯ.ತಕ್ಷಣ ಗುಂಪು ಹಲ್ಲೆ ನಡೆಸಿದ ಎಲ್ಲಾ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮತ್ತು ಘಟನೆ ನಡೆದ ದಿನ ಬಂದೋಬಸ್ತ್ ನಲ್ಲಿದ್ದು ನಿರ್ಲಕ್ಷ್ಯ ವಹಿಸಿದ ಪೋಲಿಸರ ಮೇಲೆ ಕೂಡಾ ಮಾನ್ಯ ಪೋಲಿಸ್ ವರಿಷ್ಠಾಧಿಕಾರಿಯವರು ಕ್ರಮ ಕೈಗೊಳ್ಳಬೇಕೆಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಬ್ದುಲ್ ಕರೀಮ್ ಗೇರುಕಟ್ಟೆ ಆಗ್ರಹಿಸಿದ್ದಾರೆ.









