







ಪೆರಾಡಿ: ನೆಲ್ಲಂಗೇರಿ ದುರ್ಗಾಪರಮೇಶ್ವರಿ ಅಮ್ಮನವರ ಕ್ಷೇತ್ರದಲ್ಲಿ ಅನಂತ ಅಸ್ರಣ್ಣ ಇವರ ನೇತೃತ್ವದಲ್ಲಿ ವರ್ಷಾವಧಿ ಮಹೋತ್ಸವ ಹಾಗೂ ಚಂಡಿಕಯಾಗ ಎ.24 ರಂದು ನಡೆಯಲಿದೆ.


ಬೆಳಿಗ್ಗೆ ಗಂಟೆ 7-00ರಿಂದ ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ ನವಕಲಶಬಿಷೇಕ, ಪ್ರಸನ್ನ ಪೂಜೆ, ಬೆಳಿಗ್ಗೆ ಗಂಟೆ 7-30ರಿಂದ : ಚಂಡಿಕಯಾಗ ಪ್ರಾರಂಭ, ಬೆಳಿಗ್ಗೆ ಗಂಟೆ 11-30ಕ್ಕೆ ಪೂರ್ಣಾಹುತಿ, ಮಧ್ಯಾಹ್ನ ಗಂಟೆ 12-00ಕ್ಕೆ , ದೇವರ ಉತ್ಸವ ಬಲಿ, ಮಧ್ಯಾಹ್ನ ಗಂಟೆ 12-30ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 1-00ರಿಂದ : ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ ಗಂಟೆ 8-30 ಕ್ಕೆ ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಮೂಲಸ್ಥಾನ ಗೆಜ್ಜೆಗಿರಿ ಬಡಗನೂರು, ಪುತ್ತೂರು, ಶ್ರೀ ಗೆಜ್ಜೆಗಿರಿ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ನಡೆಯಲಿದೆ.









