







ಬೆಳ್ತಂಗಡಿ : ಭಾರತೀಯ ಸೇನೆಯಲ್ಲಿ ಪೂರ್ಣ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ವಿಶೇಷವಾಗಿ ಸಮಾಜಕ್ಕೆ ಆದರ್ಶಪ್ರಾಯವಾದ ರೀತಿಯಲ್ಲಿ ಮಾದರಿ ಸೇವೆ ಸಲ್ಲಿಸುತ್ತಿರುವ ನಿವೃತ್ತ ಯೋಧರಿಗೆ ಭಾರತೀಯ ಸೇನೆಯ ಮಹಾ ದಂಡನಾಯಕ ರಾಗಿರುವ ಜನರಲ್ ಉಪೇಂದ್ರ ದ್ವಿವೇದಿ ಯವರು ನೀಡುವ ನಿವೃತ್ತ ಸಾಧಕ ಯೋಧ( veterans best Achiever’s. Award) ಪ್ರಶಸ್ತಿಗೆ ಲಯನ್ ಡಾ. ಗೋಪಾಲಕೃಷ್ಣ ಕಾಂಚೋಡು mjf ರವರು ಆಯ್ಕೆಯಾಗಿದ್ದಾರೆ.


ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಗೌರವಧ್ಯಕ್ಷರೂ ಆಗಿರುವ ಇವರು ದಕ್ಷಿಣ ಭಾರತದಿಂದ ಆಯ್ಕೆಯಾದ ಪ್ರಥಮ ಏಕೈಕ ವ್ಯಕ್ತಿಯಾಗಿದ್ದು, ಇವರಿಗೆ ಮಾ.20ರಂದು ದೇಹಲಿಯ ಸೇನಾ ಮುಖ್ಯಾಲಯದಲ್ಲಿ ಜನರಲ್ ಉಪೇಂದ್ರ ದ್ವಿವೇದಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.









