







ಬೆಳ್ತಂಗಡಿ : ಭಂಡಾರಿ ಯುವ ವೇದಿಕೆ ಬೆಳ್ತಂಗಡಿ ಇದರ ನೂತನ ಸಮಿತಿ ರಚನೆ ಮಾ. 17ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಬೆಳ್ತಂಗಡಿ ಭಂಡಾರಿ ಸಮಾಜದ ಅಧ್ಯಕ್ಷ ಉಮೇಶ್ ಭಂಡಾರಿ ಉಜಿರೆ ಇವರ ಉಪಸ್ಥಿಟಿಯಲ್ಲಿ ನಡೆಯಿತು.2026–27ನೇ ಸಾಲಿನ ಅಧ್ಯಕ್ಷರಾಗಿ ಪ್ರಶಾಂತ್ ಭಂಡಾರಿ ಅಂಡಿಂಜೆ, ಪ್ರಧಾನ ಕಾರ್ಯದರ್ಶಿಯಾಗಿ ಅಭಿಜಿತ್ ಭಂಡಾರಿ ಕನ್ಯಾಡಿ, ಕೋಶಾಧಿಕಾರಿಯಾಗಿ ಗಣೇಶ್ ಭಂಡಾರಿ ರೇಷ್ಮೆ ರೋಡ್ ಆಯ್ಕೆಯಾದರು.


ಇತರ ಪದಾಧಿಕಾರಿಗಳಾಗಿ ಜೊತೆ ಕಾರ್ಯದರ್ಶಿಯಾಗಿ ಸೌದೇಶ್ ಭಂಡಾರಿ ನರಿಯ, ಉಪಾಧ್ಯಕ್ಷರಾಗಿ ಶೋಧನ್ ಭಂಡಾರಿ ಲಾಯಿಲ, ಸಂಘಟನಾ ಕಾರ್ಯದರ್ಶಿಗಳಾಗಿ ರವಿ ಭಂಡಾರಿ, ಸುರೇಶ್ ಭಂಡಾರಿ ಅಗರಿ,ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿಗಳಾಗಿ ಸತೀಶ್ ಭಂಡಾರಿ ನಾಳ,ಹಾಗೂ ಅರ್ಪಿತ್ ಭಂಡಾರಿ ಕನ್ಯಾಡಿ, ಕ್ರೀಡಾ ಸಮಿತಿ ಕಾರ್ಯದರ್ಶಿಗಳಾಗಿ ಪ್ರಶಾಂತ್ ಭಂಡಾರಿ ಅರುವ, ಹಿತೇಶ್ ಭಂಡಾರಿ ಕೊಂಡೊಟ್ಟು,ಸದಸ್ಯರಾಗಿ ಮಿಥುನ್ ಭಂಡಾರಿ, ರಂಜು ಕೊಕ್ಕಡ, ಭರತ್ ರಾಜ್ ಭಂಡಾರಿ ಉಜಿರೆ, ಸುಧಾಕರ ಭಂಡಾರಿ ಉಜಿರೆ, ವಸಂತ ಭಂಡಾರಿ ಅಗರಿ, ಹರಿಪ್ರಸಾದ್ ಭಂಡಾರಿ ನೆರಿಯ , ಸಚಿನ್ ಭಂಡಾರಿ ಅರುವ, ರವಿಚಂದ್ರ ಭಂಡಾರಿ ಸೋಮಂತಡ್ಕ ಮತ್ತು ಸುದರ್ಶನ ಭಂಡಾರಿ ಗರ್ಡಾಡಿ ಆಯ್ಕೆಯಾದರು.ಗೌರವ ಸಲಹೆಗಾರರಾಗಿ ಉಮೇಶ್ ಭಂಡಾರಿ ಉಜಿರೆ, ಪೂವಪ್ಪ ಭಂಡಾರಿ ಮದ್ದಡ್ಕ, ಅಶೋಕ್ ಭಂಡಾರಿ ಗುಂಡಿಯಲ್ಕೆ ಆಯ್ಕೆಯಾದರು.ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು.
ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಭಾಂದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಇದೇ ವೇಳೆ ಏಪ್ರಿಲ್ 14ರಂದು ಗುರುವಾಯನಕೆರೆ ಪನೆಜಾಲುವಿನಲ್ಲಿ ಭಂಡಾರಿ ಸಮಾಜಕ್ಕೆ ಮಿಸಲಿಟ್ಟ ಜಾಗದಲ್ಲಿ ವಾರ್ಷಿಕ ಸಭೆ, ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತೀರ್ಮಾನಿಸಲಾಯಿತು.









