







ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿಯ 2025-26ನೇ ಶೈಕ್ಷಣಿಕ ವರ್ಷದ ಕ್ರೀಡಾಕೂಟವನ್ನು ಮಾ.06 ರಂದು ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್.ವಿ ಅವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಅಟಗಾರ ಸರಕಾರಿ ಪ್ರೌಢ ಶಾಲೆ ಗುರುವಾಯನಕೆರೆಯ ದೈಹಿಕ ಶಿಕ್ಷಣ ಶಿಕ್ಷಕ ವೆಂಕಟೇಶ್ ಅವರು ಮಾತನಾಡಿ ಕ್ರೀಡೆಯ ಮಹತ್ವವನ್ನು ತಿಳಿಸುತ್ತಾ “ಉತ್ತಮ ಆರೋಗ್ಯಕ್ಕಾಗಿ ಕ್ರೀಡೆಯು ಅತ್ಯವಶ್ಯಕ” ಎಂದು ತಿಳಿಸಿದರು.


ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಪದ್ಮನಾಭ ಕೆ. , IQAC ಸಂಚಾಲಕ ಡಾ. ಕುಶಾಲಪ್ಪ ಎಸ್. , ಸ್ನಾತಕೋತ್ತರ ವಿಭಾಗದ ಸಂಚಾಲಕ ಡಾ. ರವಿ ಎಂ. ಏನ್. , ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಧಾಕೃಷ್ಣ ಹೆಚ್. ಬಿ. ಹಾಗೂ ವಿದ್ಯಾರ್ಥಿ ಕ್ರೀಡಾ ಪ್ರತಿನಿಧಿಗಳಾದ ವಿಘ್ನೇಶ್ ದ್ವಿತೀಯ ಎಂ.ಎ, ಹೇಮಂತ್ ತೃತೀಯ ಬಿ.ಎ, ಮಂಜುಳಾ ತೃತೀಯ ಬಿ.ಕಾಂ. ಅವರು ಉಪಸ್ಥಿತರಿದ್ದರು, ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪಥಸಂಚಲನವನ್ನು ನಿರ್ವಹಣಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದಿವ್ಯ ಪ್ರಭು ಅವರು ನಡೆಸಿದರು. ವೀಕ್ಷಿತಾ ತೃತೀಯ ಬಿ.ಬಿ.ಎ. ಅವರು ಸ್ವಾಗತಿಸಿ, ದೀಪಾ ದ್ವಿತೀಯ ಎಂ.ಎ. ಅವರು ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು. ಸುಪ್ರಿಯಾ ಪ್ರಥಮ ಬಿ.ಕಾಂ. ಅವರು ಧನ್ಯವಾದವಿತ್ತರು, ಅನ್ವಿತಾ ದ್ವಿತೀಯ ಬಿ.ಕಾಂ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು









