







ಶಿಬಾಜೆ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರೈಮಾಸಿಕ ಒಕ್ಕೂಟ ಸಭೆಯ ಅಂಗವಾಗಿ ಹಾವುಗಳ ಗುರುತಿಸುವಿಕೆ, ಮುನ್ನೆಚ್ಚರಿಕೆ ಹಾಗೂ ಪ್ರಥಮ ಚಿಕಿತ್ಸೆಯ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಧರ್ಮಸ್ಥಳ ಶ್ರೀ ಶೌರ್ಯ ವಿಪತ್ತು ನಿರ್ವಹಣಾ ಘಟಕ ಶಿಶಿಲ–ಅರಸಿನಮಕ್ಕಿ ಇದರ ಸದಸ್ಯ ರಮೇಶ್ ಬೈರಕಟ್ಟರವರು, ಅರಣ್ಯ ಇಲಾಖೆಯಿಂದ ಗುರುತಿಸಲ್ಪಟ್ಟ ಉರಗ ರಕ್ಷಕರಾದ ಸುರೇಶ್ ಶಿಬಾಜೆ ಅವರ ಮಾರ್ಗದರ್ಶನದಲ್ಲಿ ನಡೆಸಿಕೊಟ್ಟರು.
ಸಭೆಯಲ್ಲಿ ಶಿಬಾಜೆ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಟಿ.ಆರ್., ಜನಜಾಗೃತಿ ವೇದಿಕೆಯ ತಾಲೂಕು ಸಮಿತಿ ಸದಸ್ಯ ಎಚ್.ಎಸ್. ಚೆನ್ನಪ್ಪಗೌಡ, ವಲಯಾಧ್ಯಕ್ಷ ಗಣೇಶ್ ಗೌಡ, ವಲಯ ಮೇಲ್ವಿಚಾರಕ ಶಶಿಕಲಾ, ಬೆಳ್ತಂಗಡಿ ತಾಲೂಕು ಶೌರ್ಯ ಮಾಸ್ಟರ್ ಅವಿನಾಶ್ ಭಿಡೆ, ಶಿಶಿಲ ಅರಸಿನಮಕ್ಕಿ ಶೌರ್ಯ ಸಂಯೋಜಕಿ ರಶ್ಮಿತಾ ಟಿ.ಬಿ., ಶಿಬಾಜೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಯೋಗೀಶ್, ಗ್ರಾಹಕ ಸೇವಾ ಕೇಂದ್ರದ ದಿವ್ಯಾ ಹಾಗೂ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಉದ್ದೇಶ ಮತ್ತು ಅದರ ಚಟುವಟಿಕೆಗಳ ಕುರಿತು ಮಾಹಿತಿ ನೀಡಲಾಯಿತು. ಜೊತೆಗೆ ವಿಷಪೂರಿತ ಹಾಗೂ ವಿಷರಹಿತ ಹಾವುಗಳನ್ನು ಗುರುತಿಸುವಿಕೆ ಕುರಿತು ಸಚಿತ್ರ ವಿವರಣೆ ನೀಡಲಾಯಿತು. ಹಾವುಗಳು ಮನೆಯೊಳಗೆ ಬರದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಹಾವು ಕಡಿತವಾದಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಯಿತು.









