ಸಿಯೋನ್ ಆಶ್ರಮದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

0

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾ.8ರಂದು ಆಚರಿಸಲಾಯಿತು.ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಸಿ. ಪೌಲೋಸ್ ಹಾಗೂ ಟ್ರಸ್ಟೀ ಸದಸ್ಯೆ ಮೇರಿ ಯು.ಪಿ. ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಕೇಕ್ ಕತ್ತರಿಸಿ ಮಹಿಳೆಯರ ಗೌರವವನ್ನು ಸ್ಮರಿಸಲಾಯಿತು. ಹಾಗೂ ಎಲ್ಲರಿಗೂ ಸಿಹಿ ಹಂಚುವ ಮೂಲಕ ಸಂತೋಷವನ್ನು ಹಂಚಿಕೊಳ್ಳಲಾಯಿತು. ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಸಿ. ಪೌಲೋಸ್ ಅವರು ಮಾತನಾಡಿ, “ಮಹಿಳೆಯರು ಕುಟುಂಬದ ಬೆನ್ನೆಲುಬು ಮಾತ್ರವಲ್ಲ, ಸಮಾಜದ ನಿರ್ಮಾಣದಲ್ಲಿಯೂ ಪ್ರಮುಖ ಪಾತ್ರವಹಿಸುತ್ತಾರೆ. ತಾಯಿ, ಸಹೋದರಿ, ಗುರು ಮತ್ತು ಸೇವಾ ಮನೋಭಾವದ ಪ್ರತಿರೂಪವಾಗಿ ಮಹಿಳೆಯರು ಸಮಾಜವನ್ನು ಬೆಳಗಿಸುತ್ತಿದ್ದಾರೆ. ಮಹಿಳೆಯರ ಗೌರವ, ಸಮಾನತೆ ಮತ್ತು ಸಬಲೀಕರಣವು ಸಮಾಜದ ಪ್ರಗತಿಗೆ ಅತ್ಯಂತ ಅಗತ್ಯವಾಗಿದೆ” ಎಂದು ತಿಳಿಸಿದರು.

ಸಂಸ್ಥೆಯ ಆಡಳಿತ ಮಂಡಳಿಯವರು, ಸಿಬ್ಬಂದಿ ವರ್ಗದವರು, ಆಶ್ರಮ ನಿವಾಸಿಗಳು ಹಾಗೂ ಸಂದರ್ಶಕರಾಗಿ ಆಗಮಿಸಿದ ಸೈಂಟ್ ಲಾರೆನ್ಸ್ ಚರ್ಚ್ ಬೋಂದೆಲ್ ಇಲ್ಲಿನ ಸೈಂಟ್ ಸೆಬಾಸ್ಟಿನ್ ವಾರ್ಡ್ ನ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here