ನೆರಿಯ ಪರಿಶಿಷ್ಟ ಪಂಗಡ ರೈತರಿಗೆ ಒಂದು ದಿನದ ಕೋಳಿ ಮೊಟ್ಟೆ ಸಾಕಾಣಿಕೆ ಕುರಿತು ತರಬೇತಿ ಕಾರ್ಯಗಾರ

0

ನೆರಿಯ : ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಮತ್ತು ಕಾರುಣ್ಯ ಸಂಜೀವಿನಿ ಮಹಿಳಾ ಒಕ್ಕೂಟ ಹಾಗೂ ಗ್ರಾಮ ಪಂಚಾಯತ್ ನೆರಿಯ ಇದರ ಸಹಯೋಗದಲ್ಲಿ ಪರಿಶಿಷ್ಟ ಪಂಗಡ ರೈತರಿಗೆ ಒಂದು ದಿನದ ಕೋಳಿ ಮೊಟ್ಟೆ ಸಾಕಾಣಿಕೆ ಕುರಿತು ತರಬೇತಿ ಕಾರ್ಯಗಾರ ಬಿಜು ಜೋಸೆಫ್ ದೇವಗಿರಿ ಅವರ ಮನೆಯಲ್ಲಿ ಪೆ 27.ರಂದು ನಡೆಯಿತು.

ಅಧ್ಯಕ್ಷತೆಯನ್ನು ವಹಿಸಿಕೊಂಡ ಕೃಷಿ ಇಲಾಖೆಯ ಅಧಿಕಾರಿ ಗಣೇಶ್ ಅಡಿಗ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಬಿಜು ಜೋಸೆಫ್ ಅವರು ತಮ್ಮ ಮನೆಯಲ್ಲಿ ಕೋಳಿ ಮೊಟ್ಟೆ ಸಾಕಣೆಯ ಅವರ ಅನುಭವದೊಂದಿಗೆ ಮನೆಯಲ್ಲಿ ಮೀನು ಸಾಕಾಣಿಕೆ ಬಗ್ಗೆ ಹಾಗೂ ಕೃಷಿಯ ಬಗ್ಗೆ ಮಾಹಿತಿ ರೈತರಿಗೆ ಮಾಹಿತಿಯನ್ನು ನೀಡಿದರು.

ಬೆಳ್ತಂಗಡಿ ಕೃಷಿ ಅಧಿಕಾರಿ ಗಣೇಶ್ ಆಡಿಗ ಮಾತನಾಡಿ ಕೃಷಿ ಇಲಾಖೆಯಲ್ಲಿ ದೊರೆಯುವಂತಹ ತರಬೇತಿಯನ್ನು ಪಡೆದುಕೊಂಡು ಗ್ರಾಮದ ರೈತರು ಪ್ರಯೋಜನೆಯನ್ನು ಪಡೆದುಕೊಳ್ಳಬೇಕು ಎಂದು ಸಲಹೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ನೆರಿಯ ರೈತರು ಮತ್ತು ಎನ್ ಆರ್ ಎಲ್ ಸಿಬ್ಬಂದಿಗಳು ಕಾರ್ಯಕ್ರಮದ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಗಣೇಶ್ ಅಡಿಗ ನಿರೂಪಿಸಿದರು.

LEAVE A REPLY

Please enter your comment!
Please enter your name here