






ಬೆಳ್ತಂಗಡಿ :ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ದೆ ಬೆಳ್ತಂಗಡಿ ಯಿಂದ ನಿವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ನಮ್ಮ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ತಾರಾ ಕೇಸರಿ ಇವರಿಗೆ ಹೂಗುಚ್ಛ ಕೊಟ್ಟು ನಿವೃತ್ತಿ ಜೀವನಕ್ಕೆ ಶುಭ ಹಾರೈಸಲಾಯಿತು.



ಇವರು ಸ್ಕೌಟ್ ಗೈಡ್ಸ್ ಗೆ ನೀಡಿದಂತಹ ಸಹಕಾರ ಅಮೂಲ್ಯವಾದುದು. ಪ್ರತಿ ಕಾರ್ಯಕ್ರಮದಲ್ಲೂ ಶಿಕ್ಷಣಾಧಿಕಾರಿಗಳ ಸಲಹೆ ಸೂಚನೆ, ಮಾರ್ಗದರ್ಶನವಿತ್ತು. ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿ ಪ್ರಮೀಳಾ ಪೂಜಾರಿ, ಸ್ಕೌಟ್ ಗೈಡ್ಸ್ ಶಿಕ್ಷಕರಾದ ಅಮೀತಾ, ರಮ್ಯಾ ಬಿ ಎಸ್, ಕಾರೂಣ್ಯ ಉಪಸ್ಥಿತರಿದ್ದು ಶುಭ ಹಾರೈಸಿದರು.









