ಬೆಳಾಲು ಮಾಯ ದೇವಸ್ಥಾನದ ಜಾತ್ರೆ ಗ್ರಾಮಸ್ಥರಿಂದ, ಅನಂತೋಡಿ ದೇವಸ್ಥಾನ , ಆರಿಕೋಡಿ ಕ್ಷೇತ್ರದಿಂದ ಹೊರೆಕಾಣಿಕೆ ಸಮರ್ಪಣೆ

0

ಬೆಳಾಲು: ಮಾಯ ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರೆ ಫೆ. 26ರಿಂದ ಮಾ.4ರವರೆಗೆ ಆಲಂಬಾಡಿ ಪದ್ಮನಾಭತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಫೆ. 26ರಂದು ಬೆಳಿಗ್ಗೆ ಮಾಯ ಗುತ್ತಿನ ಮನೆಯಲ್ಲಿ ದೈವಗಳಿಗೆ ಕಲಶ ಪರ್ವ ನಡೆಯಿತು. ಫೆ. 27ರಂದು ಬೆಳಗ್ಗೆ ಗಣಹೋಮ, ಮಾಯ ಗುತ್ತಿನ ಮನೆಯಲ್ಲಿ ಶಾರಿ ಹಾಕಿ ಗೊನೆ ಕಡಿದು ಬಳಿಕ ಗ್ರಾಮಸ್ಥರಿಂದ ಮಾಯ ಪರಿಸರ, ಅನಂತೋಡಿ ಶ್ರೀ ಅನಂತಪದ್ಮನಾಭಾ ದೇವಸ್ಥಾನ, ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಿಂದ ಮೆರವಣಿಗೆ ಮೂಲಕ ಹೊರೆಕಾಣಿಕೆ ಸಮರ್ಪಣೆ ಮಾಡಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್. ಪದ್ಮ ಗೌಡ ಸದಸ್ಯರು ಅನುವಂಶಿಕ ಮೋಕ್ತೆಸರ ಪುಷ್ಪದಂತ ಜೈನ್ , ಅರ್ಚಕ ಕೇಶವ ರಾಮಾಯಜಿ ಸ್ವಾಗತಿಸಿದರು.ಅರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಅರಿಕೋಡಿ,ಅನಂತೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ, ಅಸ್ರನ್ನ ಗಿರೀಶ್ ಬಾರಿತ್ತಾಯ, ಗ್ರಾ. ಪ. ಮಾಜಿ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್, ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿ,ಅನಂತೋಡಿ ಅನಂತೇಶ್ವರ ಭಜನಾ ಮಂಡಳಿ, ಕೊಲ್ಪಾಡಿ ಸುಬ್ರಹ್ಮಣ್ಯಶ್ವರ ಭಜನಾ ಮಂಡಳಿ, ಸುರುಳಿ ಭಜನಾ ಮಂಡಳಿ,ವರ ಮಹಾಲಕ್ಷ್ಮಿ ಪೂಜಾ ಸಮಿತಿ, ಉಪ ಸಮಿತಿಗಳ ಸಂಚಾಲಕರು, ಸದಸ್ಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಿದರು.

LEAVE A REPLY

Please enter your comment!
Please enter your name here