ಕೊಕ್ಕಡ ಅಡೈಶಿವಶಕ್ತಿ ಭಜನಾ ಮಂದಿರದ ಪುನರ್ ನಿರ್ಮಾಣ ಕಾರ್ಯಕ್ಕೆ ಶಾಸಕ ಹರೀಶ್ ಪೂಂಜಾ ರವರಿಂದ ರೂ.50 ಸಾವಿರ ಸಹಾಯಧನ ವಿತರಣೆ

0

ಕೊಕ್ಕಡ : ಇಲ್ಲಿಯ ಅಡೈ ಶಿವಶಕ್ತಿ ಭಜನಾ ಮಂದಿರ ಇದರ ಪುನ‌ರ್ ನಿರ್ಮಾಣ ಕಾರ್ಯಕ್ಕೆ ಶಾಸಕ ಹರೀಶ್ ಪೂಂಜಾ ರವರಿಂದ ರೂ.50ಸಾವಿರ ಸಹಾಯಧನ ವಿತರಣೆ ಮಾಡಲಾಯಿತು.ಬಿಜೆಪಿ 236 ನೇ ಬೂತ್ ಅಧ್ಯಕ್ಷರಾದ ಕಿರಣ್ ಬಾಲ್ತಿಮಾರ್ ಹಾಗೂ ಕುಶಾಲಪ್ಪ ಗೌಡ ಪೂವಾಜೆ, ಭಜನಾ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳಿಗೆ ಸಹಾಯಧನ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಧರ್ಮಸ್ಥಳ ಮಹಾಶಕ್ತಿ ಕೇಂದ್ರ ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಅಲಂಬಿಲ, ಬಿಜೆಪಿ ಬೆಳ್ತಂಗಡಿ ಮಂಡಲ ಎಸ್ಟಿ ಮೋರ್ಚಾ ಕಾರ್ಯದರ್ಶಿ ವಿಠಲ್ ಕುರ್ಲೆ, ಕೊಕ್ಕಡ ಶಕ್ತಿ ಕೇಂದ್ರ ಪ್ರಮುಖ್ ಪ್ರಶಾಂತ ಪೂವಾಜೆ, ಕೊಕ್ಕಡ ಕೃಷಿ ಪತ್ತಿನ ಸಹಕಾರಿ ಸಂಘ ನಿರ್ದೇಶಕ ಶ್ರೀನಾಥ್ ಬಡೆಕೈಲು, ನಿಕಟ ಪೂರ್ವ ಪಂಚಾಯತ್ ಉಪಾಧ್ಯಕ್ಷ ಪ್ರಭಾಕರ ಮಲ್ಲಿಗೆ ಮಜಲು, ನಿಕಟಪೂರ್ವ ಪಂಚಾಯತ್ ಸದಸ್ಯ ಜಗದೀಶ್‌ ಪೂಜಾರಿ ಕೆಂಪಕೋಡಿ, ಶಿವಶಕ್ತಿ ಭಜನಾ ಮಂಡಳಿ ಅಧ್ಯಕ್ಷ ರವಿಚಂದ್ರ ಪೊಡಿಕೆತ್ತೂರು, ಕಾರ್ಯದರ್ಶಿ ಆನಂದ ಅಡ್ಡೆ, ಮಾಜಿ ಪಂಚಾಯತ್ ಸದಸ್ಯ ಲಕ್ಷ್ಮೀ ಅಡೈ, ಬಬಿತಾ ಕೊಲ್ಲಾಜೆ, ಕುಸುಮ ಅಡೈ ಸೇವಾ ನಿರತೆ ಧರ್ಮಸ್ಥಳ ಸಂಘ, ಮಹೇಂದ್ರ, ಶೀನ ಅಡೈ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here