ಜೆಇಇ, ಬಿ ಆರ್ಕ್ ಫಲಿತಾಂಶ ಎಕ್ಸೆಲ್ ನ ಸುಪ್ರೀತ್ ಎಂ ಬಡಿಗೇರ ಜಿಲ್ಲೆಗೆ ಪ್ರಥಮ

0

ಗುರುವಾಯನಕೆರೆ : ರಾಷ್ಟ್ರ ಮಟ್ಟದ ಜೆಇಇ ಮೈನ್ಸ್ ಬಿ.ಆರ್ಕ್ ಫಲಿತಾಂಶ ಪ್ರಕಟವಾಗಿದ್ದು, ಗುರುವಾಯನಕೆರೆಯ ಎಕ್ಸೆಲ್ ಕಾಲೇಜಿನ ಸುಪ್ರೀತ್ ಮಂಜುನಾಥ್ ಬಡಿಗೇರ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಅವರು 98.5567 ಪರ್ಸೆಂಟೈಲ್ ಪಡೆದಿದ್ದು, ಡ್ರಾಯಿಂಗ್ ನಲ್ಲಿ 99.94 ಪಡೆದಿದ್ದಾರೆ. ಸುನೈನಾ 98.1738 ಪರ್ಸಂಟೈಲ್ ಪಡೆದು, ಬಿ ಪ್ಲಾನಿಂಗ್ ನಲ್ಲಿ 92. 4194 ಪರ್ಸೆಂಟೈಲ್ ಪಡೆದಿದ್ದಾರೆ. ಸಾನ್ವಿ ಪಿ ಎನ್ – 95. 8945, ಹೃಷಿಕೇಶ್ – 95.1993, ಎಂ.ಇಶಾನ್ – 94.4292, ಲಹರಿ ಎನ್ 93.1026, ಪ್ರತೀಕ್ಷಾ ಎಂ.ಕೆ 92.3237 ಪರ್ಸೆಂಟೈಲ್ ಪಡೆದಿದ್ದಾರೆ.

ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here