







ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತಕ್ಕೆ ಒಳಪಟ್ಟ ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನ ಸೌಖ್ಯವನ ಪರೀಕ ಇದರ 11 ನೇ ವರ್ಷದ ಭಜನಾ ವಾರ್ಷಿಕೋತ್ಸವ ಸಮಾರಂಭವು ಫೆ.22 ರಂದು ಡಾ| ಡಿ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ವಿಜೃಂಭಣೆಯಿಂದ ಜರಗಿತು.

ಸಂಧ್ಯಾಕಾಲ 6 ಘಂಟೆಗೆ ಜರಗಿದ ಸಮಾರಂಭದಲ್ಲಿ ತುಳುನಾಡಿನ ಕಂಬಳದ ಭೀಷ್ಮ ಎಂದೇ ಪ್ರಸಿದ್ಧರಾಗಿರುವ ಗುಣಪಾಲ ಕಡಂಬ ಅವರು ದೀಪ ಪ್ರಜ್ವಲನೆಗೊಳಿಸುವ ಮೂಲಕ ಕುಣಿತ ಭಜನೆಗೆ ಚಾಲನೆಯನ್ನು ನೀಡಿದರು. ತಮ್ಮ ಶುಭಸಂದೇಶದಲ್ಲಿ ಡಿ ವೀರೇಂದ್ರ ಹೆಗ್ಗಡೆ ಅವರ ಕಲ್ಪನೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತೀ ವರುಷ ಜರಗುತ್ತಿರುವ ಭಜನಾ ಕಮ್ಮಟದಿಂದ ಪ್ರೇರಣೆಗೊಂಡ ಸೌಖ್ಯವನ ಸಂಸ್ಥೆಯ ಸಿಬ್ಬಂದಿಗಳು ಆರಂಭ ಮಾಡಿದ ಈ ಕಾರ್ಯಕ್ರಮವು ಇಂದು 11ನೇ ವರ್ಷದಲ್ಲಿ ಯಶಸ್ವಿಯಾಗಿ ಮತ್ತು ಶಿಸ್ತುಬದ್ಧವಾಗಿ ಮುನ್ನಡೆಯುತ್ತಿರುವುದು ನಮಗೆಲ್ಲ ಅತ್ಯಂತ ಸಂತೋಷವನ್ನು ನೀಡಿದೆ ಎಂದು ಹೇಳುತ್ತಾ, ನಾನು ಕಂಡಂತೆ ಇಲ್ಲಿಯ ವಾತಾವರಣ ಮತ್ತು ಪ್ರಕೃತಿದತ್ತವಾದ ಮಡಿಲನ್ನು ಕಣ್ತುಂಬಿಸಿ ಕೊಂಡದ್ದು ನನಗೆ ಒದಗಿ ಬಂದ ಸೌಭಾಗ್ಯ ಎಂದು ಹೇಳಿದರು.


ಸಂಸ್ಥೆಯ ವತಿಯಿಂದ ಗುಣಪಾಲ ಕಡಂಬ ಅವರನ್ನು ಗೌರವಿಸಲಾಯಿತು. ಸೌಖ್ಯವನ ಸಂಸ್ಥೆಯ ವೈದ್ಯಾಧಿಕಾರಿಗಳ ತಂಡ, ಪುರುಷ ಹಾಗೂ ಮಹಿಳಾ ತಂಡ ಮತ್ತು ಊರಿನ ಎರಡು ತಂಡಗಳಿಂದ ಕುಣಿತ ಭಜನೆಯು ಜರಗಿತು.
ರಾತ್ರಿ 11 ಘಂಟೆಗೆ ಶ್ರೀದೇವರ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಕಾರ್ಯಕ್ರಮ ಸಂಪನ್ನಗೊಂಡಿತು. ಸೌಖ್ಯವನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಅವರ ನಿರ್ದೇಶನದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟನೆಗೊಳಿಸಲಾಯಿತು. ಮುಖ್ಯ ವೈದ್ಯಾಧಿಕಾರಿಗಳಾದ ಡಾ|| ಗೋಪಾಲ ಪೂಜಾರಿ, ಸ್ಥಾನಿಕ ವೈದ್ಯಾಧಿಕಾರಿಗಳಾದ ಡಾ|| ಶೋಭಿತ್ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಉದಯ ರಾಜ್ ಹೆಗ್ಡೆ ಹಾಗೂ ವಿಠಲ ಶೆಟ್ಟಿ ಸೀತಾನದಿ ಉಪಸ್ತಿತರಿದ್ದರು.









