ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಂತನಾ ದಿನಾಚರಣೆ

0

ಉಜಿರೆ:ಫೆ23. ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರಾದ ಬೇಡನ್ ಪೊವೆಲ್ ಹಾಗೂ ಲೇಡಿ ಬೇಡನ್ ಪೊವೆಲ್ ರವರ ಜನ್ಮ ದಿನದ ನೆನಪಿನಲ್ಲಿ ಹಾಗೂ ವಿಶ್ವ ಸ್ಕೌಟ್ ದಿನಾಚರಣೆ ಅಂಗವಾಗಿ ಚಿಂತನಾ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಕೌಟ್ ದಿನದ ಮಹತ್ವ ಹಾಗೂ ಸರ್ವಧರ್ಮ ಪ್ರಾರ್ಥನೆ ಮಾಡಲಾಯಿತು.ದಿನದ ಅಂಗವಾಗಿ ಕಬ್ ಬುಲ್ ಬುಲ್ ಹಾಗೂ ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಗೆ ಸದ್ಭಾವನಾ ದಾನ, ಪಕ್ಷಿ ಆಹಾರ ತಯಾರಿಕೆ, ಜಾಗೃತಿ ಕಾರ್ಯಕ್ರಮ-ಕಾಗದದ ಚೀಲ ತಯಾರಿಕೆ ಮತ್ತು ವಿತರಣೆ, ಸಾನಿಧ್ಯ ವಿಶೇಷ ಶಾಲೆಗೆ ಭೇಟಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿನಿ ಅನ್ವಿ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here