






ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ SDM-Rotary Career Guidance & Placement Centre ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಸಹಯೋಗದಲ್ಲಿ “ಗ್ರಾಮೀಣ ಯುವಕರ ಪ್ರತಿಭೆಗಳ ಅನಾವರಣ – ವಿಕಸಿತ ಭಾರತ 2047 ಗೆ ಮಾರ್ಗಸೂಚಿ” ಎಂಬ ವಿಷಯದ ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರವನ್ನು ಇದೇ ಬರುವ ಫೆಬ್ರವರಿ 24 ರಂದು ಕಾಲೇಜಿನ ಸೆಮಿನಾರ್ ಹಾಲ್-1ರಲ್ಲಿ ಆಯೋಜಿಸಲಾಯಿಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶಚಂದ್ರ ಎಸ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ತುಮಕೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಪ್ರೊ. ಜಯಶೀಲಾ ಅವರು ಭಾಗವಹಿಸಿವರು. ಗೌರವ ಅತಿಥಿಗಳಾಗಿ ಖ್ಯಾತ ಅರ್ಥಶಾಸ್ತ್ರಜ್ಞ ಎಸ್. ವಿಶ್ವನಾಥ ಭಟ್, ಸಾಮಾಜಿಕ ಕಾರ್ಯ ಅಧ್ಯಯನ ವಿಭಾಗದ ಅಧ್ಯಕ್ಷರಾದ ಪ್ರೊ. ಪರಶುರಾಮ ಕೆ.ಜಿ. ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ವಹಿಸಿಕೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ “Tapping the Talents of Rural Youth – A Roadmap to Viksit Bharath 2047” ಎಂಬ ISBN ಪುಸ್ತಕವನ್ನು ಬಿಡುಗಡೆ ಕಾರ್ಯಕ್ರಮವು ನಡೆಯಲಿದೆ.
ಕಾರ್ಯಕ್ರಮದಲ್ಲಿ “ವಿಕಸಿತ ಭಾರತ 2047 – ಭಾರತದ ಸಮೃದ್ಧಿಯ ಸುವರ್ಣ ಯುಗ” ವಿಷಯದ ಕುರಿತು ಎಸ್. ವಿಶ್ವನಾಥ ಭಟ್ ಅವರು ಮುಖ್ಯ ಭಾಷಣ ನೀಡುವರು.
ಮೊದಲ ಅಧಿವೇಶನದಲ್ಲಿ “Skilled Minds, Strong Nation – Towards Viksit Bharath 2047” ಎಂಬ ವಿಷಯದ ಕುರಿತು Tumkur University ಯ ಸಾಮಾಜಿಕ ಕಾರ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಹಿರಿಯ ಪ್ರಾಧ್ಯಾಪಕರೂ ಅಧ್ಯಕ್ಷರಾದ ಪ್ರೊ. ಪರಶುರಾಮ ಕೆ.ಜಿ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡುವರು.
ಎರಡನೇ ವಿಚಾರ ಗೋಷ್ಠಿಯಲ್ಲಿ “Viksit Bharath 2047 ಗೆ ಸಮಾವೇಶಾತ್ಮಕ ಅಭಿವೃದ್ಧಿಯ ಸ್ತಂಭವಾಗಿ ಮಹಿಳಾ ಸಬಲೀಕರಣ” ಎಂಬ ವಿಷಯದ ಕುರಿತು ಮಂಗಳೂರು ಮೂಲದ ಆಂಕರ್, ಉದ್ಯಮಿ ಮತ್ತು ತರಬೇತುದಾರರಾದ ಸೌಜನ್ಯ ಹೆಗ್ಡೆ ಅವರು ಉಪನ್ಯಾಸ ನೀಡುವರು.
ಮೂರನೇ ವಿಚಾರಗೋಷ್ಠಿಯಲ್ಲಿ “Viksit Bharath 2047 ಗಾಗಿ ಗ್ರಾಮೀಣ ಉದ್ಯಮಶೀಲತೆಯ ಪ್ರಜ್ವಲನ” ಎಂಬ ವಿಷಯದ ಕುರಿತು NABARD ನಿವೃತ್ತ ಸಹಾಯಕ ಮಹಾಪ್ರಬಂಧಕರಾದ ವೈ.ವಿ. ಗುಂಡುರಾವ್ ಅವರು ಉಪನ್ಯಾಸ ನೀಡಿದರು.


ನಾಲ್ಕನೇ ವಿಚಾರ ಗೋಷ್ಠಿಯಲ್ಲಿ ಮಧ್ಯಾಹ್ನ “Innovate, Empower, Transform – Viksit Bharath 2047 ಗೆ ಯುವಶಕ್ತಿಯೇ ಎಂಜಿನ್” ಎಂಬ ವಿಷಯದ ಕುರಿತು ವಚನ ಇನ್ವೆಸ್ಟ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕರೂ ಖ್ಯಾತ ಹೂಡಿಕೆ ತಜ್ಞರಾದ ಸಿ.ಎ. ರುದ್ರಮೂರ್ತಿ ಬಿ.ವಿ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುವರು.
ಇದರ ಜೊತೆಗೆ ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಿಪಡಿಸುವ ಕಾರ್ಯಕ್ರಮವು ನಡೆಯಲಿದೆ. ಮೊದಲ ತಾಂತ್ರಿಕ ವಿಚಾರ ಗೋಷ್ಠಿಯಲ್ಲಿ Mangalore University ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹ ಪ್ರಾಧ್ಯಾಪಕರೂ ಅಧ್ಯಕ್ಷರಾದ ಡಾ. ಜಗದೀಶ ಟಿ. ಅವರು ಅಧ್ಯಕ್ಷತೆ ವಹಿಸುವರು.
ಎರಡನೇ ತಾಂತ್ರಿಕ ವಿಚಾರಗೋಷ್ಠಿಯಲ್ಲಿ ಕಾರ್ಕಳದ ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಸುದರ್ಶನ ಪಿ. ಅವರು ಅಧ್ಯಕ್ಷತೆ ವಹಿಸಿವರು. ಮೂರನೇ ತಾಂತ್ರಿಕ ವಿಚಾರಗೋಷ್ಠಿಯಲ್ಲಿ ಉಜಿರೆಯ SDM ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಸಂತೋಷ್ ಅಲ್ಬರ್ಟ್ ಸಾಲ್ದಾನಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ಯಾನಲ್ ಚರ್ಚೆ ಮತ್ತು ಟಿಪ್ಪಣಿ: ಮಧ್ಯಾಹ್ನ 3:30 ರಿಂದ 4:40 ರವರೆಗೆ “Green Values and Digital Power with Inclusive Finance – Viksit Bharath 2047 ಕಡೆ ಸುಸ್ಥಿರ ಪ್ರಯಾಣ” ಎಂಬ ವಿಷಯದ ಕುರಿತು ಪ್ಯಾನಲ್ ಚರ್ಚೆ ನಡೆಯಲಿದೆ. ಈ ಪ್ಯಾನಲ್ ಚರ್ಚೆಗೆ ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಆಡಳಿತ ರಿಜಿಸ್ಟ್ರಾರರಾದ ಪ್ರೊ. ಶ್ರೀಧರ ಎನ್. ಭಟ್ಟ ಅವರು ಸಂಚಾಲಕರಾಗಿ ಕಾರ್ಯನಿರ್ವಹಿಸುವರು.
ಪ್ಯಾನಲ್ ಸದಸ್ಯರಾಗಿ ವಚನ ಇನ್ವೆಸ್ಟ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಸಂಸ್ಥೆಯ ಸ್ಥಾಪಕರೂ ಖ್ಯಾತ ಹೂಡಿಕೆ ತಜ್ಞರಾದ ಸಿ.ಎ. ರುದ್ರಮೂರ್ತಿ ಬಿ.ವಿ., NABARD ನಿವೃತ್ತ ಸಹಾಯಕ ಮಹಾಪ್ರಬಂಧಕರಾದ ವೈ.ವಿ. ಗುಂಡುರಾವ್, Tumkur University ಯ ಸಾಮಾಜಿಕ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಪರಶುರಾಮ ಕೆ.ಜಿ., ಹಾಗೂ ಕಾರ್ಕಳದ ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಸುದರ್ಶನ ಪಿ. ಭಾಗವಹಿಸಿವರು.
ಸಮಾರೋಪ ಸಮಾರಂಭ: ಸಂಜೆ 4:40 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಇದರ ಅಧ್ಯಕ್ಷತೆಯನ್ನು ಉಜಿರೆಯ Sri Dharmasthala Manjunatheshwara College (ಸ್ವಾಯತ್ತ) ಉಪಪ್ರಾಂಶುಪಾಲೆ ನಂದಕುಮಾರಿ ಕೆ.ಪಿ. ಅವರು ವಹಿಸುವರು.
ಮುಖ್ಯ ಅತಿಥಿಗಳಾಗಿ ವಚನ ಇನ್ವೆಸ್ಟ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಸಂಸ್ಥೆಯ ಸ್ಥಾಪಕರೂ, ಖ್ಯಾತ ಹೂಡಿಕೆ ತಜ್ಞರಾದ ಸಿ.ಎ. ರುದ್ರಮೂರ್ತಿ ಬಿ.ವಿ., NABARD ನಿವೃತ್ತ ಸಹಾಯಕ ಮಹಾಪ್ರಬಂಧಕ ವೈ.ವಿ. ಗುಂಡುರಾವ್, ಉಜಿರೆಯ SDM ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಟಿ. ಹಾಗೂ IQAC ಸಂಯೋಜಕರಾದ ಜಿ.ಆರ್. ಭಟ್ ಉಪಸ್ಥಿತರಿರುವರು.
ಸಮಾರೋಪದಲ್ಲಿ ಅತಿಥಿಗಳು ಗ್ರಾಮೀಣ ಯುವಕರ ಸಾಮರ್ಥ್ಯ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ಮತ್ತು ಸುಸ್ಥಿರ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವರು.








