ಉರುವಾಲು ಶ್ರೀ ವನಶಾಸ್ತಾರ ಮತ್ತು ವೀರಭದ್ರ ದೇವಸ್ಥಾನ ಬ್ರಹ್ಮಕಲಶೋತ್ಸವದ ಪ್ರಯುಕ್ತ ಉಗ್ರಾಣ ಮುಹೂರ್ತ ಉದ್ಘಾಟನೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ

0

ಉರುವಾಲು: ಶ್ರೀ ವನಶಾಸ್ತಾರ ಮತ್ತು ವೀರಭದ್ರ ದೇವಸ್ಥಾನ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಉಗ್ರಾಣ ಮುಹೂರ್ತ ಉದ್ಘಾಟನೆಯನ್ನು ಕಣಿಯೂರು ರೈತ ಬಂಧು ಆಹಾರೋದ್ಯಮ ಮಾಲಕರಾದ ಶಿವಶಂಕರ್ ನಾಯಕ್ ,ಕಾರ್ಯಾಲಯ ಉದ್ಘಾಟನೆಯನ್ನು ಜನಾರ್ದನ ಪೂಜಾರಿ ಕಡ್ತಿಲ ಮಾಡಿದರು.

ಭಜನಾ ಕಾರ್ಯಕ್ರಮವನ್ನು ಕರಾಯ ಶ್ರೀ ಕೃಷ್ಣ ಭಜನಾ ಮಂಡಳಿ ಅಧ್ಯಕ್ಷ ಜಗದೀಶ ಶೆಟ್ಟಿ ಮೈರ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.ನಂತರ ಆಹ್ವಾನಿತ‌ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಯೋಗೀಶ್ ಪೂಜಾರಿ ಕಡ್ತಿಲ, ಕಾರ್ಯಾಧ್ಯಕ್ಷ ಸುನೀಲ್ ಅಣವು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ದಾಸಪ್ಪ ಗೌಡ ಕೋಡಿಯಡ್ಕ,ವಿಜಯ ಕುಮಾರ್ ಕಲ್ಲಳಿಕೆ,ಡೀಕಮ್ಮ ಕೊರಗಪ್ಪ ಪೂಜಾರಿ ಕಾರಿಂಜ, ಪ್ರಸಾದ್ ಶೆಟ್ಟಿ ಕೆರ್ಪುಣಿ,ದೇವಸ್ಥಾನದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here