ಸಂಚಾರಿ ಸ್ಟುಡಿಯೋ ಯೂ ಟ್ಯೂಬರ್ ಸಂತೋಷ್ ಕಡಬಗೆ ಜೈಲು ಶಿಕ್ಷೆ ಆದೇಶ- ಬೆಂಗಳೂರು ಪೊಲೀಸರಿಂದ ಬಂಧನ

0

ಬೆಳ್ತಂಗಡಿ: ನ್ಯಾಯಾಲಯದ ಆದೇಶವನ್ನು ಪದೇ ಪದೇ ಉಲ್ಲಂಸಿದ ಆರೋಪದಡಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಮೂವತ್ತು ದಿನಗಳ ಜೈಲು ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ‘ಸಂಚಾರಿ ಸ್ಟುಡಿಯೋ’ ಯೂ ಟ್ಯೂಬರ್ ಸಂತೋಷ್ ಕಡಬ ಅವರನ್ನು ಬೆಂಗಳೂರು ಪೊಲೀಸರು ಫೆ. ೧೮ರಂದು ವಶಕ್ಕೆ ಪಡೆದಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ತನ್ನ ‘ಸಂಚಾರಿ ಸ್ಟುಡಿಯೋ’ ಯೂಟ್ಯೂಬ್ ಚಾನೆಲ್ ಮೂಲಕ ಅವಹೇಳನಕಾರಿ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದ ಆರೋಪ ಸಂತೋಷ್ ಅವರ ಮೇಲಿದೆ. ಈ ಹಿಂದೆ ಈ ಕುರಿತು ನ್ಯಾಯಾಲಯ ಅವರಿಗೆ ನೋಟಿಸ್ ಜಾರಿ ಮಾಡಿ ಇಂತಹ ವಿಡಿಯೋಗಳನ್ನು ಪ್ರಸಾರ ಮಾಡದಂತೆ ಆದೇಶಿಸಿತ್ತು. ಆದರೆ ನ್ಯಾಯಾಲಯದ ಸೂಚನೆಯನ್ನು ಲೆಕ್ಕಿಸದೆ ಅವರು ಮತ್ತೆ ಅವಹೇಳನಕಾರಿ ವಿಡಿಯೋಗಳನ್ನು ಅಪ್‌ಲೋಡ್ ಮಾಡುವುದನ್ನು ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್ ೩೦ ದಿನಗಳ ಜೈಲು ಶಿಕ್ಷೆ ಪ್ರಕಟಿಸಿದೆ. ಫೆ. ೧೮ರಂದು ಬೆಂಗಳೂರು ಪೊಲೀಸರು ಮತ್ತು ಕೋರ್ಟ್ ಸಿಬ್ಬಂದಿ ಕಡಬಕ್ಕೆ ಆಗಮಿಸಿ ಸಂತೋಷ್ ಅವರ ಸ್ಟುಡಿಯೋದಿಂದ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಪರ ಹಿರಿಯ ವಕೀಲ ರಾಜಶೇಖರ್ ಇಲ್ಯಾರ್ ವಾದ ಮಂಡಿಸಿದ್ದರು. ಇವರ ವಾದ ಪುರಸ್ಕರಿಸಿದ ನ್ಯಾಯಾಲಯ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಅಥವಾ ಅವಹೇಳನಕಾರಿ ಅಂಶಗಳನ್ನು ಹಂಚಿಕೊಳ್ಳುವುದು ಕಾನೂನುಬಾಹಿರ ಎಂಬ ಅಂಶವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.

LEAVE A REPLY

Please enter your comment!
Please enter your name here