ಮಚ್ಚಿನ ಮುದಲಡ್ಕದಲ್ಲಿ ಚಿರತೆ ದಾಳಿಗೆ ನಾಯಿ ಬಲಿ

0

ಮಚ್ಚಿನ ಗ್ರಾಮದ ಮುದಲಡ್ಕ ಯಮುನರವರ ನಾಯಿಯನ್ನು ನಿನ್ನೆ ರಾತ್ರಿ ಸುಮಾರು 2ಗಂಟೆ ವೇಳೆಗೆ ಚಿರತೆ ದಾಳಿ ಮಾಡಿ ಮುದಲಡ್ಕ ಮೋಹನರವರ ತೋಟದಲ್ಲಿ ಸ್ವಲ್ಪ ಭಾಗವನ್ನು ತಿಂದು ಬಿಟ್ಟು ಹೋಗಿದ್ದು ಅಲ್ಲಲ್ಲಿ ಚಿರತೆಗಳು ಕಂಡು ಬರುತ್ತಿದ್ದು ಜನರು ಆತಂಕ ಪಡುವಂತಾಗಿದೆ.

ಗ್ರಾಮ ಪಂಚಾಯಿತಿನ ನಿರ್ದೇಶನದಂತೆ ಅರಣ್ಯ ಇಲಾಖೆಯವರು ಹಲವು ಕಡೆಗಳಲ್ಲಿ ಚಿರತೆಯನ್ನು ಹಿಡಿಯಲು ಬೋನುಗಳನ್ನು ಇಟ್ಟು ಪ್ರಯತ್ನ ಪಡುತ್ತಿದ್ದು ಆದರೆ ಒಂದು ಕಡೆಯಿಂದ ಇನ್ನೊಂದು ಕಡೆಯಲ್ಲಿ ಕಂಡು ಬರುತ್ತಿರುವುದರಿಂದ ಅರಣ್ಯ ಇಲಾಖೆಯಿಂದ ನಿತ್ಯ ಪ್ರಯತ್ನಗಳು ನಡೆಯುತ್ತಿದೆ. ಕಡಂಬು,ಕೊಲ್ಲಾಜೆ , ಹೀಗೆ ಹಲವಾರು ಕಡೆಗಳಲ್ಲಿ ನಿತ್ಯ ಚಿರತೆಯ ಹೆಜ್ಜೆ ಗುರುತುಗಳು ಕಂಡುಬರುತ್ತಲೇ ಇದೆ. ಆದ್ದರಿಂದ ಜನರು ಆದಷ್ಟು ಜಾಗೃತರಾಗಬೇಕಾಗಿದೆ. ✍️ ಹರ್ಷ ಬಳ್ಳಮಂಜ

LEAVE A REPLY

Please enter your comment!
Please enter your name here