






ಬೆಳ್ತಂಗಡಿ ತಾಲೂಕಿನ ಅಂಡಿಂಜೆಯ ನವೋದಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಇದರ 28 ನೇ ವರ್ಷದ ” ವಿಶ್ವಕರ್ಮ ಪೂಜೆ “ಯ ಸಂದರ್ಭ “ಉಚಿತ ಸಾಮೂಹಿಕ ಉಪನಯನ” ವನ್ನು ಹಮ್ಮಿಕೊಳ್ಳಲಾಯಿತು.

ವೇಣೂರು ಪ್ರಕಾಶ ಪುರೋಹಿತರ ನೇತ್ರೃತ್ವ ,ಶ್ರೀ ವೇಲಾಪುರಿ ವಿಶ್ವನಾಥ ಶರ್ಮರ ಆಚಾರ್ಯತ್ವ ವಹಿಸಿದ್ದರು. ಬಳಿಕ ಸಂಘದ ಅಧ್ಯಕ್ಷ ಪ್ರಭಾಕರ ಆಚಾರ್ಯರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮವನ್ನು ಏರ್ಪಡಿಸಲಾಯಿತು.


ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು , ಜಿ.ಟಿ.ಆಚಾರ್ಯ ಮುಂಬೈ ,ಮೂಡಬಿದ್ರೆ ಗುರುಮಠ ಕಾಳಿಕಾಂಬಾ ದೇವಳದ ಆಡಳಿತ ಮೊಕ್ತೇಸರ ಎಂ.ಕೆ.ಬಾಲಕ್ರೃಷ್ಣ ಆಚಾರ್ಯ ಉಳಿಯ, ಉಜಿರೆಯ ಸ್ವರ್ಣೋಧ್ಯಮಿ ಆನಂದ ಆಚಾರ್ಯರು ಅಭ್ಯಾಗತರುಗಳಾಗಿ ಆಗಮಿಸಿದ್ದರು.
ಕೂಡುವಳಿಕೆ ಗ್ರಾಮ ಮೊಕ್ತೇಸರ ಶ್ರೀ ರಾಧಾಕ್ರೃಷ್ಣ ಆಚಾರ್ಯ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸಂಘದ ಸದಸ್ಯರ ಉತ್ತಮ ಅಂಕ ಗಳಿಕ ವಿದ್ಯಾರ್ಥಿಗಳನ್ನು ಮತ್ತು ಉಪನಯದ ವಟುಗಳಿಗೆ ಬೇಕಾಗಿರುವ ಸಾಹಿತ್ಯವನ್ನು ಸಂಪೂರ್ಣವಾಗಿ ಒದಗಿಸಿದ ಶ್ರೀ ನವೀನ ಆಚಾರ್ಯ, ಪಿಲಿಯೂರು ಇವರುಗಳನ್ನು ಗೌರವಿಸಲಾಯಿತು. ಡಿ.ಭಾಸ್ಕರ ಆಚಾರ್ಯರು ಪ್ರಾಸ್ತಾವನೆಯೊಂದಿಗೆ ಸ್ವಾಗತಿಸಿ , ಸಾನಿಧ್ಯ ಬಿ.ಕೆ.ಆಚಾರ್ಯ ನಿರೂಪಿಸಿ, ಸೌಮ್ಯಾ ರಾಧಾಕ್ರೃಷ್ಣ ವಂದನಾರ್ಪಣೆಗೈದರು.









