






ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಅಂಗ್ಲ ಮಾಧ್ಯಮ ಶಾಲೆ ಮಡಂತ್ಯಾರಿನಲ್ಲಿ ಫೆಬ್ರವರಿ 16 ಮತ್ತು 17ರಂದು 2025-26ನೇ ಶೈಕ್ಷಣಿಕ ವರ್ಷದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಶಾಲಾ ಸಭಾಭವನದಲ್ಲಿ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭಿಸಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸೇಕ್ರೆಡ್ ಹಾರ್ಟ್ ಕಾನ್ವೆಂಟಿನ ಧರ್ಮ ಭಗಿನಿಯಾದ ಸಿ|ಅನಿತಾ ಫೆರ್ನಾಂಡಿಸ್ ರವರು ಆಗಮಿಸಿದ್ದರು, ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಇದು ನಿಮ್ಮ ಪರಿಶ್ರಮ, ಸಮರ್ಪಣೆ ಮತ್ತು ಪ್ರಯತ್ನಗಳ ಫಲವಾಗಿದೆ. ಇಂದು ನೀವು ನಿಮ್ಮ ಪರಿಶ್ರಮದ ಯಶಸ್ಸನ್ನು ಆಚರಿಸುತ್ತಿದ್ದೀರಿ ಎಂದು ಹೇಳಿ ಮಕ್ಕಳಿಗೆ ಶುಭ ಹಾರೈಸಿದರು.


ಶಾಲಾ ಮುಖ್ಯೋಪಾಧ್ಯಾಯರಾದ ಸ್ವಾ| ದೀಪಕ್ ಲಿಯೋ ಡೇಸ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಸ್ಪರ್ಧೆಗಳಲ್ಲಿ ನಾವು ಗೆಲ್ಲುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ನಾವು ಭಾಗವಹಿಸುವುದನ್ನು ನಿಲ್ಲಿಸಬಾರದು ಎಂದು ಹೇಳಿ ಶುಭ ಹಾರೈಸಿದರು.
ನರ್ಸರಿ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಸಹಶಿಕ್ಷಕರಾದ ಜೆರಾಲ್ಡ್ ಡಿಸೋಜ ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹ ಶಿಕ್ಷಕಿಯರಾದ ರೀಮಾ ವೆರೋನ ರೋಡ್ರಿಗಸ್ ನಿರೂಪಿಸಿ, ಸಿ| ಟ್ರೀಜಾ ಡಿಸೋಜ ರವರು ಸ್ವಾಗತಿಸಿ, ಶ್ವೇತಾ ರವರು ಧನ್ಯವಾದವನ್ನು ಸಮರ್ಪಿಸಿದರು.









