ಶಬರಿಮಲೆ ಯಾತ್ರೆಗೆ ತೆರಳಿದ್ದ ತೆಕ್ಕಾರಿನ ಯುವಕ ಹೃದಯಾಘಾತದಿಂದ ನಿಧನ

0

ಬೆಳ್ತಂಗಡಿ : ತಾಲೂಕಿನ ತೆಕ್ಕಾರಿನ ಯುವಕ ಸುಧೀರ್ ತೆಕ್ಕಾರು (28) ಶಬರಿಮಲೆ ಯಾತ್ರೆಗೆ ತೆರಳಿದ್ದು, ಈ ವೇಳೆ ಶಬರಿಮಲೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಪ್ಪಿನಂಗಡಿ ಪ್ರಖಂಡ ಸುರಕ್ಷಾ ಪ್ರಮುಖರಾಗಿದ್ದ ಸುಧೀರ್‌ ಫ್ರೆಂಡ್ಸ್ ತೆಕ್ಕಾರು ಸೇರಿದಂತೆ ಹತ್ತಾರು ಸಂಘಟನೆಗಳಲ್ಲಿ ಸಕ್ರಿಯವಾಗಿ ಸಮಾಜಸೇವೆ ಮಾಡುತ್ತಿದ್ದು, ಜನಮನ್ನಣೆ ಪಡೆದಿದ್ದಾರೆ.

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದ ಸಕ್ರಿಯ ಕಾರ್ಯಕರ್ತ, ಗೋಪಾಲಕೃಷ್ಣ ಭಜನಾ ಮಂದಿರದ ಮಾಜಿ ಅಧ್ಯಕ್ಷರು, ಫ್ರೆಂಡ್ಸ್ ತೆಕ್ಕಾರು ತಂಡದ ಸಕ್ರಿಯ ಕಾರ್ಯಕರ್ತರಾಗಿದ್ದರು.

LEAVE A REPLY

Please enter your comment!
Please enter your name here